ಕರ್ನಾಟಕ

karnataka

ETV Bharat / state

ಬಿಎಸ್​​​​ವೈ 3 ವರ್ಷ ಸಿಎಂ ಆಗಿರುವುದು ಡೌಟ್: ಮುನಿಸು ಮುಂದುವರೆಸಿದ ಯತ್ನಾಳ್​

ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಿಎಂ ಬಿಎಸ್​ವೈ ಜತೆಗಿನ ತಮ್ಮ ಮುನಿಸನ್ನು ಮುಂದುವರೆಸಿದ್ದಾರೆ. ಮಗು ಅಳದಿದ್ದರೆ ತಾಯಿ ಹಾಲು ಕುಡಿಸುವುದಿಲ್ಲ ಎನ್ನುವದನ್ನು ಅರ್ಥ ಮಾಡಿಕೊಳ್ಳಬೇಕು ಎಂದಿರುವ ಯತ್ನಾಳ್, ಬಿಎಸ್​ವೈ ಬೆಂಬಲಿಗರನ್ನು ಮಾತಿನಲ್ಲಿಯೇ ತಿವಿದರು.

Again controversial statement by Basanagouda Patil Yatnal's
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

By

Published : Oct 30, 2020, 7:24 PM IST

Updated : Oct 30, 2020, 8:25 PM IST

ವಿಜಯಪುರ : ಯಡಿಯೂರಪ್ಪ ಮೂರು ವರ್ಷಗಳ ಕಾಲ ಮುಖ್ಯಮಂತ್ರಿ ಆಗಿರ್ತಾರೆ ಎಂದು ನಾನೇನೂ ಹೇಳುವುದಿಲ್ಲ ಎನ್ನುವ ಮೂಲಕ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಿಎಂ ಜತೆಗಿನ ತಮ್ಮ ಮುನಿಸನ್ನು ಮುಂದುವರೆಸಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಅವರು, ಬೇರೆ ಸಚಿವರಂತೆ ಸೂರ್ಯ, ಚಂದ್ರರಿರುವಷ್ಟು ದಿನ ಮುಖ್ಯಮಂತ್ರಿ ಆಗಿರ್ತಾರೆ ಎಂದು ಹೇಳಲ್ಲ ಎನ್ನುವ ಮೂಲಕ ಸಿಎಂ ಬದಲಾವಣೆ ಕೂಗಿಗೆ ಮತ್ತೊಮ್ಮೆ ಯತ್ನಾಳ್​ ತುಪ್ಪ ಸುರಿದಿದ್ದಾರೆ.

ನಾನ್ಯಾವುದೇ ವಿವಾದಾತ್ಮಕ ಹೇಳಿಕೆ ನೀಡಿಲ್ಲ, ಅನುದಾನ ಬಿಡುಗಡೆ ಮಾಡದಿರುವುದನ್ನು ಪ್ರಶ್ನಿಸಿದ್ದೇನೆ ಹೊರತು ಪಕ್ಷ ವಿರೋಧಿ ಹೇಳಿಕೆ ನೀಡಿಲ್ಲ. ಹೀಗಾಗಿ ಇಂದು ರಾಜ್ಯದ ಬಹುತೇಕ ಮಹಾನಗರ ಪಾಲಿಕೆಗಳಿಗೆ ಹಣ ಬಿಡುಗಡೆ ಮಾಡಲಾಗಿದೆ. ಮಗು ಅಳದಿದ್ದರೆ ತಾಯಿ ಹಾಲು ಕುಡಿಸುವುದಿಲ್ಲ ಎನ್ನುವದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಪರೋಕ್ಷವಾಗಿ ತಮ್ಮ ಹೇಳಿಕೆಗೆ ವಿರೋಧ ವ್ಯಕ್ತಪಡಿಸುತ್ತಿದ್ದ ಬಿಎಸ್​ವೈ ಬೆಂಬಲಿಗರನ್ನು ಮಾತಿನಲ್ಲಿಯೇ ತಿವಿದರು.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

ಮೊನ್ನೆ ನಾನು ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿದ್ದೆ. ನಾನು ಇನ್ನೂ ಸಚಿವನೇ ಆಗಿಲ್ಲ, ಸಿಎಂ ಸ್ಥಾನದ ಆಕಾಂಕ್ಷಿಯಂತೂ ಅಲ್ಲವೇ ಅಲ್ಲ. ಯಾರ ಹಣೆಯಲ್ಲಿ ಏನು ಬರೆದಿದೆ ಯಾರಿಗೆ ಗೊತ್ತು? ಎಂದು ಮಾರ್ಮಿಕವಾಗಿ ನುಡಿದರು.

Last Updated : Oct 30, 2020, 8:25 PM IST

ABOUT THE AUTHOR

...view details