ವಿಜಯಪುರ :ಪೊರಕೆ ತಯಾರಿಸುತ್ತಿದ್ದ ಕಾರ್ಖಾನೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಅಪಾರ ಪ್ರಮಾಣದ ಪೊರಕೆಗಳು ಬೆಂಕಿಗಾಹುತಿಯಾದ ಘಟನೆ ವಿಜಯಪುರ ನಗರದ ಕೊಂಚಿಕೊರಮ ಓಣಿಯಲ್ಲಿ ನಡೆದಿದೆ.
ನಗರದ ಗೋಳಗುಮ್ಮಟ ಎದುರಿಗಿರುವ ಕೊಂಚಿಕೊರಮ ಓಣಿಯ ನಿವಾಸಿ ಮಳ್ಳೆಪ್ಪ ಕೊಂಚಿ ಕೊರಮ ಎಂಬುವರಿಗೆ ಸೇರಿದ ಸೆಂಧಿ ಪೊರಕೆ ಘಟಕ ಬೆಂಕಿಗೆ ಆಹುತಿಯಾಗಿದೆ. ಮಾರಾಟ ಮಾಡಲು ಸೆಂಧಿ ಪೊರಕೆ ತಯಾರಿ ಶೇಖರಿಸಿಡಲಾಗಿತ್ತು.