ಕರ್ನಾಟಕ

karnataka

ETV Bharat / state

ಲಾರಿಗಳ ಮುಖಾಮುಖಿ ಡಿಕ್ಕಿ.. ನಾಲ್ವರಿಗೆ ಗಂಭೀರ ಗಾಯ, ಓರ್ವನ ಸ್ಥಿತಿ ಚಿಂತಾಜನಕ! - vijayapura accident news

ಎರಡು ಲಾರಿಗಳು ಮುಖಾಮುಖಿ ಡಿಕ್ಕಿಯಾಗಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡು ಓರ್ವನ ಸ್ಥಿತಿ ಚಿಂತಾಜನಕವಾಗಿದೆ.

accident between lorries
ಲಾರಿ ಅಪಘಾತ

By

Published : Sep 14, 2021, 9:38 AM IST

ವಿಜಯಪುರ: ಎರಡು ಲಾರಿಗಳು ಮುಖಾಮುಖಿ ಡಿಕ್ಕಿಯಾದ ಪರಿಣಾಮ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರೆ, ಓರ್ವನ ಸ್ಥಿತಿ ಚಿಂತಾಜನಕವಾದ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ಯರಗಲ್ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದಿದೆ.

ಲಾರಿ ಅಪಘಾತ

ಒಂದು ಲಾರಿಯಲ್ಲಿ ರಸಗೊಬ್ಬರ ಹಾಗೂ ಇನ್ನೊಂದು ಲಾರಿಯಲ್ಲಿ ಜಾನುವಾರುಗಳ ಆಹಾರ ಸಾಗಾಟ ಮಾಡಲಾಗುತ್ತಿತ್ತು. AP21-X 7759 ಹಾಗೂ KA28-D 3199 ದಾಖಲಾತಿ ನಂಬರ್ ಹೊಂದಿದ ಲಾರಿಗಳು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಎರಡು ಲಾರಿಗಳ ಚಾಲಕರು ಹಾಗೂ ಕ್ಲೀನರ್​ಗಳಿಗೆ ಗಾಯಗಳಾಗಿವೆ.

ಇದನ್ನೂ ಓದಿ:ನಕಲಿ ಚಿನ್ನದ ನಾಣ್ಯ ನೀಡಿ ವಂಚಿಸುತ್ತಿದ್ದ ಖದೀಮರ ಹೆಡೆಮುರಿ ಕಟ್ಟಿದ ದಾವಣಗೆರೆ ಪೊಲೀಸರು

ಲಾರಿಗಳು ನುಜ್ಜುಗುಜ್ಜಾಗಿದ್ದು, ಅದರಲ್ಲಿ ಸಿಲುಕಿದ್ದವರನ್ನು ಪೊಲೀಸರು ಸಾರ್ವಜನಿಕರ ಸಹಾಯದಿಂದ ಹೊರತೆಗೆದು ಸಿಂದಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾತದ ಪರಿಣಾಮ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು. ನಂತರ ಸುಗಮ ಸಂಚಾರಕ್ಕೆ ಪೊಲೀಸರು ಅನುವು ಮಾಡಿಕೊಟ್ಟರು. ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ABOUT THE AUTHOR

...view details