ವಿಜಯಪುರ:ಲಾರಿ ಹಾಗೂ ಸರ್ಕಾರಿ ಬಸ್ ಮುಖಾಮುಖಿ ಡಿಕ್ಕಿಯಾಗಿ ಓರ್ವನ ಕಾಲು ಮುರಿದು ಹಲವರು ಗಾಯಗೊಂಡಿದ್ದಾರೆ. ಜಿಲ್ಲೆಯ ಕೊಲ್ಹಾರ ಪಟ್ಟಣದ ಗೆಣ್ಣೂರ ಕ್ರಾಸ್ ಬಳಿ ಶನಿವಾರ ರಾತ್ರಿ ಈ ಘಟನೆ ನಡೆದಿದೆ.
ವಿಜಯಪುರ: ಲಾರಿ-ಬಸ್ ಡಿಕ್ಕಿ... ಚಾಲಕನ ಕಾಲು ಕಟ್, ಪ್ರಯಾಣಿಕರಿಗೆ ಗಾಯ - ಚಾಲಕನ ಕಾಲು ಕಟ್
ಲಾರಿ ಹಾಗೂ ಸರ್ಕಾರಿ ಬಸ್ ಮಧ್ಯೆ ಮುಖಾಮುಖಿ ಡಿಕ್ಕಿ. ಬಸ್‌ನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು. ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದ ಗೆಣ್ಣೂರ ಕ್ರಾಸ್ ಬಳಿ ಘಟನೆ.
![ವಿಜಯಪುರ: ಲಾರಿ-ಬಸ್ ಡಿಕ್ಕಿ... ಚಾಲಕನ ಕಾಲು ಕಟ್, ಪ್ರಯಾಣಿಕರಿಗೆ ಗಾಯ Road accident in vijaypur](https://etvbharatimages.akamaized.net/etvbharat/prod-images/768-512-16658902-thumbnail-3x2-news.jpg)
ವಿಜಯಪುರದಲ್ಲಿ ಲಾರಿ-ಸರ್ಕಾರಿ ಬಸ್ ಮಧ್ಯೆ ಅಪಘಾತ
ಅಪಘಾತದಲ್ಲಿ ಲಾರಿ ಚಾಲಕನ ಕಾಲು ಕಟ್ ಆಗಿದೆ. ಬಸ್ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಆದರೆ ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಕೊಲ್ಹಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ:ಬೆಳಗಾವಿ: ಲಾರಿ ಹರಿದು ಬೈಕ್ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವು