ವಿಜಯಪುರ: ಒಂದು ಗುಂಟೆ ಜಮೀನನ್ನು ಅಳತೆ ಮಾಡಿಕೊಡಲು 5000 ಸಾವಿರ ಲಂಚ ಕೇಳಿದ ಪ್ರಥಮ ದರ್ಜೆ ಸಹಾಯಕರೊಬ್ಬರು ಎಸಿಬಿ ಬಲೆಗೆ ಬಿದ್ದಿದ್ದಾರೆ.
ಜಾಗ ಅಳತೆ ಮಾಡಿಕೊಡಲು ₹ 5 ಸಾವಿರ ಲಂಚ ಕೇಳಿದ.. ಕೊನೆಗೆ ಎಸಿಬಿ ಬಲೆಗೆ ಬಿದ್ದ ಪ್ರಥಮ ದರ್ಜೆ ಸಹಾಯಕ.. - undefined
ಜಮೀನನ್ನು ಅಳತೆ ಮಾಡಿಕೊಡಲು 5000 ಸಾವಿರ ಲಂಚ ಕೇಳಿದ FDA ಅಧಿಕಾರಿ ಮಹ್ಮದ್ ರಫೀಕ್ ಗೋಳಸಂಗಿ ಎಸಿಬಿ ಬಲೆಗೆ ಬಿದ್ದಿದ್ದು, ವಿಜಯಪುರ ಎಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯಪುರ ನಗರದ ಹೊಸ ತಹಶೀಲ್ದಾರ ಕಚೇರಿಯಲ್ಲಿ ಎಸಿಬಿ ದಾಳಿ ನಡೆಸಿದ್ದು, ಮಹ್ಮದ್ ರಫೀಕ್ ಗೋಳಸಂಗಿ ಎಸಿಬಿ ಬಲೆಗೆ ಬಿದ್ದ ಪ್ರಥಮ ದರ್ಜೆ ಸಹಾಯಕ. ತಮ್ಮ ಒಂದು ಗುಂಟೆ ಜಮೀನನ್ನು ಅಳತೆ ಮಾಡಿಕೊಡಲು ಶಬ್ಬೀರ್ ಅಹ್ಮದ್ ಅತ್ತಾರ್ ಎಂಬುವರು ವಿನಂತಿಸಿದ್ದರು. ಆದರೆ, ಎಫ್ಡಿಎ ಮಹ್ಮದ್ ರಫೀಕ್ ಇದಕ್ಕೆ 5000 ರೂ. ಲಂಚ ಕೇಳಿದ್ದರು. ಈ ಬಗ್ಗೆಶಬ್ಬೀರ್ ಎಸಿಬಿಗೆ ದೂರು ನೀಡಿದ್ದರು. ಇಂದು ಕಚೇರಿಯಲ್ಲಿ ಹಣ ಸ್ವೀಕರಿಸುವ ಸಮಯದಲ್ಲಿ ಎಸಿಬಿ ಡಿವೈಎಸ್ಪಿ ಮಲ್ಲೇಶ ದೊಡಮನಿ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ವಿಜಯಪುರ ಎಸಿಬಿ ಪೊಲೀಸ್ ಠಾಣೆಯಲ್ಲಿ ಆರೋಪಿ ಮೊಹ್ಮದ್ ರಫೀಕ್ ವಿರುದ್ಧ ಪ್ರಕರಣ ದಾಖಲಾಗಿದೆ.