ಕರ್ನಾಟಕ

karnataka

ETV Bharat / state

ಎಸಿಬಿ ಭ್ರಷ್ಟರ ಬೇಟೆ: ತನ್ನದೇ ಇಲಾಖೆಯ ಅಧಿಕಾರಿಯಿಂದ ಲಂಚ ಪಡೆಯುತ್ತಿದ್ದ ಇಂಜಿನಿಯರ್! - ವಿಜಯಪುರ ನೀರು ಸರಬರಾಜು ಇಲಾಖೆ

ಲಂಚ ಸ್ವೀಕರಿಸುತ್ತಿದ್ದ ವೇಳೆ ವಿಜಯಪುರ ನಗರದ ನೀರು ಸರಬರಾಜು ಇಲಾಖೆ ಇಂಜಿನಿಯರ್ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಲಂಚ ಸ್ವೀಕಾರ: ಇಂಜೀನಿಯರ್ ಎಸಿಬಿ ಬಲೆಗೆ

By

Published : Oct 24, 2019, 10:53 AM IST

ವಿಜಯಪುರ: ಲಂಚ ಸ್ವೀಕರಿಸುತ್ತಿದ್ದ ವೇಳೆ ನೀರು ಸರಬರಾಜು ಇಲಾಖೆ ಇಂಜಿನಿಯರ್ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಲಂಚ ಸ್ವೀಕಾರ: ಇಂಜೀನಿಯರ್ ಎಸಿಬಿ ಬಲೆಗೆ

ವಿಜಯಪುರ ನಗರದ ನಗರ ನೀರು ಸರಬರಾಜು ಹಾಗೂ ಒಳ ಚರಂಡಿ ಮಂಡಳಿ ನಂಬರ್ 2 ಸಬ್ ಡಿವಿಜನ್ ಕಚೇರಿಯ ಎಇಇ ವಿ.ಜಿ ವಸ್ತ್ರದ ಎಸಿಬಿ ಬಲೆಗೆ ಬಿದ್ದವರು.

ಇವರು ತಮ್ಮದೇ ಇಲಾಖೆಯ ಸಹಾಯಕ ಇಂಜಿನಿಯರ್ ಅಜೀತ್ ಚೌಗಲೆ ಎಂಬುವವರಿಂದ 2 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ‌ ಪೊಲೀಸರು ದಾಳಿ ಮಾಡಿದ್ದಾರೆ. ವರ್ಗಾವಣೆಯಾದ ಅಜೀತ್​ ಸೇವಾ ಪುಸ್ತಕ ಕಳುಹಿಸಿ ಕೊಡಲು ಲಂಚದ ಬೇಡಿಕೆಯನ್ನು ವಸ್ತ್ರದ ಇಟ್ಟಿದ್ದರಂತೆ. ಈ ಹಿನ್ನೆಲೆಯಲ್ಲಿ ಎಸಿಬಿಗೆ ಅಜೀತ್ ದೂರು ನೀಡಿದ್ದರು.

ಎಸಿಬಿ ಡಿವೈಎಸ್ಪಿ ಮಲ್ಲೇಶ ದೊಡ್ಡಮನಿ, ಸಿಪಿಐ ಎಸ್ ಆರ್ ಗಣಾಚಾರಿ ಹಾಗೂ ಸಚಿನ್ ಚಲವಾದಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

ಆರೋಪಿ‌ ಎಇಇ ವಸ್ತ್ರದ ಅವರನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ

ABOUT THE AUTHOR

...view details