ಕರ್ನಾಟಕ

karnataka

ETV Bharat / state

ವಿಜಯಪುರದಲ್ಲಿ ಎಸಿಬಿ ಬಲೆಗೆ ಬಿದ್ದ ಪಾಲಿಕೆ ಎಕ್ಸಿಕ್ಯೂಟಿವ್‌ ಎಂಜಿನಿಯರ್ - ವಿಜಯಪುರ: ಮಹಾನಗರ ಪಾಲಿಕೆ ಅಧಿಕಾರಿ ಎಸಿಬಿ ಬಲೆಗೆ

ಒಳಚರಂಡಿ ಹಾಗೂ ಪೈಪ್​​ಲೈನ್ ಕಾಮಗಾರಿಗೆ ಅನುದಾನ‌ ಬಿಡುಗಡೆ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟು ಅದನ್ನು ಪಡೆಯುವಾಗ ಪಾಲಿಕೆ ಅಧಿಕಾರಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ಬಲೆಗೆ ಬಿದ್ದರು.

ACB raid to Metropolitan Police Officer in Vijayapura
ಮಹಾನಗರ ಪಾಲಿಕೆ ಅಧಿಕಾರಿ ಎಸಿಬಿ ಬಲೆಗೆ

By

Published : Apr 21, 2021, 7:03 AM IST

ವಿಜಯಪುರ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಒಳಚರಂಡಿ ಹಾಗೂ ಪೈಪ್​​ಲೈನ್ ಕಾಮಗಾರಿಗೆ ಅನುದಾನ‌ ಬಿಡುಗಡೆ ಮಾಡಲು ಲಂಚಕ್ಕೆ ಕೈಯ್ಯೊಡ್ಡಿದ ಎಕ್ಸಿಕ್ಯೂಟಿವ್ ಎಂಜಿನಿಯರ್‌ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಎರಡು ವರ್ಷದ ಹಿಂದಿನ ಕಾಮಗಾರಿಯ ಎರಡು ಬಿಲ್ ಪಾವತಿ ಮಾಡಲು ಎಕ್ಸಿಕ್ಯೂಟಿವ್ ಎಂಜಿನಿಯರ್​ ತಾರಾಸಿಂಗ್​ ದೊಡ್ಡಮನಿ 4,000 ರೂ. ಹಣ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಗುತ್ತಿಗೆದಾರ ಸದಾನಂದ ವಿಠ್ಠಲ ಗುನ್ನಾಪುರ ಎಂಬವವರು ಎಸಿಬಿಗೆ ದೂರು ನೀಡಿದ್ದರು.

ಈ ದೂರಿನ ಆಧಾರದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು, ಲಂಚ ಪಡೆಯುವಾಗ ಅಧಿಕಾರಿಯನ್ನು ಖೆಡ್ಡಾಗೆ ಕೆಡವಿದ್ದಾರೆ.

ಇದನ್ನೂ ಓದಿ: ಇಂದಿನಿಂದ ಕಠಿಣ ನಿಯಮ ಜಾರಿ; ಯಾವುದಕ್ಕೆ ಅವಕಾಶ, ಯಾವುದಕ್ಕೆ ನಿರ್ಬಂಧ?

For All Latest Updates

TAGGED:

ABOUT THE AUTHOR

...view details