ಕರ್ನಾಟಕ

karnataka

ವಿಜಯಪುರ : ದೇವರಾಜ ಅರಸು ಅಭಿವೃದ್ಧಿ ನಿಗಮದ ಸಹಾಯಕ ಅಧಿಕಾರಿ ಎಸಿಬಿ ಬಲೆಗೆ

By

Published : Mar 14, 2022, 6:44 PM IST

ಸಾಲದ ಮೊತ್ತ ತಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲು ದಾಖಲೆಗಳನ್ನು ಮೇಲಧಿಕಾರಿಗಳಿಗೆ ಕಳುಹಿಸಲು 5,000 ರೂ. ಲಂಚ ಕೇಳಿದ್ದರು. ಈ ಸಂಬಂಧ ಎಸಿಬಿಗೆ ದೂರು ನೀಡಿದ್ದ ಕಾಶಿಬಾಯಿ, ತನ್ನ ನಾದಿನಿ ರೇಣುಕಾ ಮೂಲಕ ಲಂಚದ ಹಣ ಮೊದಲು ಹಂತವಾಗಿ 3,000 ರೂ. ನೀಡಲು ಹೋದಾಗ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ದಯಾನಂದ ಬಲ್ಲಾಳ್‌ ಅವರನ್ನ ಬಂಧಿಸಿದ್ದಾರೆ..

ಸಹಾಯಕ ಅಭಿವೃದ್ಧಿ ಅಧಿಕಾರಿ ದಯಾನಂದ ಬಲ್ಲಾಳ
ಸಹಾಯಕ ಅಭಿವೃದ್ಧಿ ಅಧಿಕಾರಿ ದಯಾನಂದ ಬಲ್ಲಾಳ

ವಿಜಯಪುರ :ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮದಡಿ ಒಂದು ಎಮ್ಮೆ ಸಾಕಲು ಸಹಾಯ ಧನ ಹಾಗೂ ಸಾಲದ ರೂಪದಲ್ಲಿ 50 ಸಾವಿರ ರೂ. ಪಡೆಯಲು ಮಹಿಳೆಯೊಬ್ಬಳಿಗೆ 5000 ರೂ. ಲಂಚದ ಬೇಡಿಕೆ ಇಟ್ಟಿದ್ದ ಇಂಡಿ ಸಹಾಯಕ ಅಭಿವೃದ್ಧಿ ಅಧಿಕಾರಿ ದಯಾನಂದ ಬಿಲ್ಲಾಳ್ ಎಂಬುವರು ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.‌

ಈ ಕುರಿತು ಇಂಡಿ ತಾಲೂಕಿನ ಅಂಜುಟಗಿ ಗ್ರಾಮದ ಮಹಿಳೆ ಕಾಶಿಬಾಯಿ ಪರಮಾತ್ಮ ಮಡಿವಾಳರ ಎಸಿಬಿ ಕಚೇರಿಗೆ ದೂರು ನೀಡಿದ್ದರು. ಡಿ‌.ದೇವರಾಜ ಅರಸು ಅಭಿವೃದ್ಧಿ ನಿಗಮದ ಅಡಿಯಲ್ಲಿ ಹೈನುಗಾರಿಕೆ ಮಾಡಲು ಸಹಾಯಧನ ಮೂಲಕ ಎಮ್ಮೆ ಖರೀದಿಸಲು ಇದರ ಸಾಲ ಸೇರಿ 50 ಸಾವಿರ ರೂ.‌ಗಳ ಅರ್ಜಿ ಹಾಕಿ ಫಲಾನುಭವಿಯಾಗಿ ಆಯ್ಕೆಯಾಗಿದ್ದರು.

ಸಾಲದ ಮೊತ್ತ ತಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲು ದಾಖಲೆಗಳನ್ನು ಮೇಲಧಿಕಾರಿಗಳಿಗೆ ಕಳುಹಿಸಲು 5,000 ರೂ. ಲಂಚ ಕೇಳಿದ್ದರು. ಈ ಸಂಬಂಧ ಎಸಿಬಿಗೆ ದೂರು ನೀಡಿದ್ದ ಕಾಶಿಬಾಯಿ, ತನ್ನ ನಾದಿನಿ ರೇಣುಕಾ ಮೂಲಕ ಲಂಚದ ಹಣ ಮೊದಲು ಹಂತವಾಗಿ 3,000 ರೂ. ನೀಡಲು ಹೋದಾಗ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ದಯಾನಂದ ಬಲ್ಲಾಳ್‌ ಅವರನ್ನ ಬಂಧಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details