ವಿಜಯಪುರ: ಸೋಡಾ ಫ್ಯಾಕ್ಟರಿ ನಿಯಮ ಉಲ್ಲಂಘನೆ ಕುರಿತ ಆರೋಪದ ಮೇಲೆ ಗೋವಿಂದ್ ಮರಾಠೆ ಎಂಬುವರಿಂದ 7 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಆಹಾರ ಸುರಕ್ಷತಾ ಅಧಿಕಾರಿಗೆ ಎಸಿಬಿ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.
ವಿಜಯಪುರ: ಆಹಾರ ಸುರಕ್ಷತಾ ಅಧಿಕಾರಿ ಮೇಲೆ ಎಸಿಬಿ ದಾಳಿ - ACB attack on food safety officer in Vijayapura
ವಿಜಯಪುರ ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಎಫ್‌ಎಸ್‌ಎಸ್‌ಐ ಇಲಾಖೆಯ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಲಂಚ ಸ್ವೀಕರಿಸುತ್ತಿದ್ದ ಅಧಿಕಾರಿಯನ್ನು ವಶಕ್ಕೆ ಪಡೆದು ತನಿಖೆಗೆ ಒಳಪಡಿಸಿದ್ದಾರೆ.
ಲಂಚ ಸ್ವೀಕರಿಸುತ್ತಿದ್ದ ಅಧಿಕಾರಿ ಮೇಲೆ ಎಸಿಬಿ ದಾಳಿ
ಆಹಾರ ಸುರಕ್ಷತಾ ಅಧಿಕಾರಿ ಇಸಾಕ್ ಹುಸೇನ್ ಫಾರೋಕಿ ಸೋಡಾ ಫ್ಯಾಕ್ಟರಿ ನಿಯಮ ಉಲ್ಲಂಘನೆ ಕುರಿತ ಆರೋಪದ ಮೇಲೆ ಗೋವಿಂದ್ ಮರಾಠೆ ಎಂಬುವವರಿಗೆ 7 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದರು ಎಂಬ ಮಾಹಿತಿ ದೊರೆತಿದೆ.
ಅಧಿಕಾರಿಯ ಲಂಚಾವತಾರ ಕುರಿತಂತೆ ಗೋವಿಂದ ಮರಾಠೆ ನೀಡಿದ ದೂರಿನನ್ವಯ ಎಸಿಬಿ ಡಿವೈಎಸ್ಪಿ ಮಂಜುನಾಥ ಗಂಗಲ್, ಇನ್ಸ್‌ಪೆಕ್ಟರ್ ಹರಿಶ್ಚಂದ್ರ ನೇತೃತ್ವದಲ್ಲಿ ದಾಳಿ ನಡೆದಿದೆ.
TAGGED:
ವಿಜಯಪುರದಲ್ಲಿ ಎಸಿಬಿ ದಾಳಿ