ವಿಜಯಪುರ:ನಗರದ ಆರ್ಟಿಓ ಕಚೇರಿ ಹಾಗೂ ಖಾಸಗಿ ಏಜಂಟರ ಅಂಗಡಿ ಮೇಲೆ ಎಸಿಬಿ ದಾಳಿ ನಡೆಸಿದ್ದು, ಐದು ಸ್ಮಾರ್ಟ್ ಫೋನ್ ಹಾಗೂ ಸುಮಾರು 40 ಸಾವಿರ ನಗದನ್ನು ವಶಕ್ಕೆ ಪಡೆದುಕೊಂಡಿದೆ.
ಡಿಎಸ್ ಪಿ, ವೇಣುಗೋಪಾಲ್, ಇನ್ಸ್ಪೆಕ್ಟರ್ ಸಚಿನ್ ಹಾಗೂ ರಾಘವೇಂದ್ರ ಹಳ್ಳೂರು ನೇತೃತ್ವದಲ್ಲಿ ದಾಳಿ ನಡೆದಿದ್ದು, ಆರ್ ಟಿ ಓ ಕಚೇರಿ ಗೇಟ್ ಬಂದ್ ಮಾಡಿ ಸುಮಾರು 40 ಏಜಂಟರ್ಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಆರ್ಟಿಒ ಕಛೇರಿ ಮೇಲೆ ದಾಳಿ ಮಾಡಿದ ಎಸಿಬಿ...5 ಸ್ಮಾರ್ಟ್ ಫೋನ್ ಸೇರಿ 40 ಸಾವಿರ ಹಣ ವಶ... ಜನರಿಂದ ನಿಗದಿತ ಹಣಕ್ಕಿಂತ ಹೆಚ್ಚಿನ ಹಣ ಸಂಗ್ರಹ ಮಾಡುತ್ತಿದ್ದುದರಿಂದ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ನಾವು ದಾಳಿ ಮಾಡಿದ್ದೇವೆ ಎಂದು ದಾಳಿ ವಿಚಾರವಾಗಿ ವಿಜಯಪುರದಲ್ಲಿ ಎಸಿಬಿ ಎಸ್ ಪಿ ಅಮರನಾಥ್ ರೆಡ್ಡಿ ಹೇಳಿಕೆ ನೀಡಿದ್ದಾರೆ.
ದಾಳಿ ವೇಳೆ ಸುಮಾರು ಎರಡೂವರೆ ಲಕ್ಷ ರೂಪಾಯಿ ವಶಪಡಿಸಿಕೊಂಡಿದ್ದೇವೆ. 20 ಜನ ಏಜೆಂಟರಿಂದ ದಾಖಲೆಗಳನ್ನು ವಶಕ್ಕೆ ಪಡೆದಿದ್ದೇವೆ. ತನಿಖಾ ಹಂತದಲ್ಲಿರೋ ಕಾರಣ ಆಮೇಲೆ ಹೆಚ್ಚಿನ ಮಾಹಿತಿ ಬಹಿರಂಗ ಮಾಡಲಾಗುವುದು. ನ್ಯಾಯಾಲಯದಲ್ಲಿ ವಾರೆಂಟ್ ಪಡೆದು ಕೆಲವು ಅಂಗಡಿಗಳನ್ನು ಸೀಜ್ ಮಾಡಲಾಗಿದೆ. ಕೆಲವು ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಿದ್ದೇವೆ ಎಂದಿದ್ದಾರೆ.