ಕರ್ನಾಟಕ

karnataka

ETV Bharat / state

ವಿಜಯಪುರ ನಿರ್ಮಿತಿ ಕೇಂದ್ರದ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ - ACB attack on Vijayapura Nirmiti Kendra officer residence

ಆದಾಯಕ್ಕಿಂತ ಹೆಚ್ಚು ಆಸ್ತಿ ಮಾಡಿರುವ ಆರೋಪ ಕೇಳಿಬಂದ ಹಿನ್ನೆಲೆ ಇಂದು ಬೆಳಗ್ಗೆ ಎಸಿಬಿ ಅಧಿಕಾರಿಗಳ ತಂಡ ವಿಜಯಪುರ ಜಿಲ್ಲಾ ನಿರ್ಮಿತಿ ಕೇಂದ್ರದ ಪ್ರಾಜೆಕ್ಟ್ ಮ್ಯಾನೇಜರ್ ಗೋಪಿನಾಥ ಸಾ ಮಲಜಿ ಅವರ ನಿವಾಸ, ಕಚೇರಿ, ಸ್ಟೋರ್ ಮೇಲೆ ದಾಳಿ ನಡೆಸಿ, ದಾಖಲೆ ಪರಿಶೀಲನೆ ನಡೆಯುತ್ತಿದೆ.

ಎಸಿಬಿ ದಾಳಿ
ಎಸಿಬಿ ದಾಳಿ

By

Published : Mar 16, 2022, 9:48 AM IST

ವಿಜಯಪುರ: ಇಂದು ಬೆಳಗ್ಗೆ ವಿಜಯಪುರ ಜಿಲ್ಲಾ ನಿರ್ಮಿತಿ ಕೇಂದ್ರದ ಪ್ರಾಜೆಕ್ಟ್ ಮ್ಯಾನೇಜರ್ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ವಿಜಯಪುರ ‌ಜಿಲ್ಲಾ ನಿರ್ಮಿತಿ ಕೇಂದ್ರದ ಪ್ರಾಜೆಕ್ಟ್ ಮ್ಯಾನೇಜರ್ ಗೋಪಿನಾಥ ಸಾ ಮಲಜಿ ಅವರ ನಿವಾಸ, ಕಚೇರಿ, ಸ್ಟೋರ್ ಹಾಗೂ ಕಚೇರಿ ಸಿಬ್ಬಂದಿ ನಿವಾಸದ ಮೇಲೂ ದಾಳಿ ಮಾಡಲಾಗಿದೆ. ಇದರ ಜೊತೆ ಬಾಗಲಕೋಟೆ‌ ಜಿಲ್ಲೆಯಲ್ಲಿರುವ ಗೋಪಿನಾಥ ಸಂಬಂಧಿಗಳ ಎರಡು ಮನೆಗಳ ಮೇಲೆ ಸಹ ದಾಳಿ ನಡೆಸಲಾಗಿದೆ.

ನಿರ್ಮಿತಿ‌ ಕೇಂದ್ರದ ಕಚೇರಿ ಹಾಗೂ ಸ್ಟೋರ್​ನಲ್ಲಿ ಅಧಿಕಾರಿಗಳು ದಾಖಲೆ ಪರಿಶೀಲನೆ ಮಾಡುತ್ತಿದ್ದಾರೆ.‌ ನಗರದ ಸೊಲ್ಲಾಪುರ ರಸ್ತೆಯಲ್ಲಿರುವ ಗೋಪಿನಾಥ ಸಾ ಮಲಜಿ ನಿವಾಸ ಹಾಗೂ ದರ್ಗಾ ಪ್ರದೇಶದಲ್ಲಿರುವ ಕಚೇರಿ ಹಾಗೂ ಸ್ಟೋರ್​ನಲ್ಲಿ ಸಹ ದಾಖಲಾತಿ ಪರಿಶೀಲನೆ ಮುಂದುವರೆದಿದೆ.

ಇನ್ನು ನಿರ್ಮಿತಿ ಕೇದ್ರದ ಅಕೌಟೆಂಟ್ ಮಲ್ಲಮ್ಮ ಎಂಬುವರ ನಿವಾಸದ ಮೇಲೂ ಸಹ ಎಸಿಬಿ ದಾಳಿ ನಡೆಸಿದೆ. ವಿಜಯಪುರದ ರಾಮದೇವ್ ನಗರದಲ್ಲಿರುವ ಮಲ್ಲಮ್ಮ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ ಮುಂದುವರೆಸಲಾಗಿದೆ. ಎಸಿಬಿ, ಡಿವೈಎಸ್​ಪಿ ಮಂಜುನಾಥ ಗಂಗಲ್ ಹಾಗೂ ತಂಡ ಬೆಳಗ್ಗೆ 6 ಗಂಟೆಗೆ ಏಕಾಏಕಿ ದಾಳಿ ನಡೆಸಿದೆ.

ಇದನ್ನೂ ಓದಿ:ರಾಜ್ಯದ 75 ಕಡೆ ಎಸಿಬಿ ದಾಳಿ.. 18 ಸರ್ಕಾರಿ ಅಧಿಕಾರಿಗಳ ದಾಖಲೆ ಪರಿಶೀಲಿಸುತ್ತಿರುವ ACB ಸಿಬ್ಬಂದಿ!

ABOUT THE AUTHOR

...view details