ವಿಜಯಪುರ:ಲಂಚ ಸ್ವೀಕರಿಸುತ್ತಿದ್ದ ವೇಳೆ ಚಿಕ್ಕರೂಗಿ ಗ್ರಾಮ ಸಹಾಯಕ ಮಲ್ಲಪ್ಪ ನಾಯ್ಕೋಡಿ ಮೇಲೆ ಎಸಿಬಿ ದಾಳಿ ನಡೆಸಿ, ಬಂಧಿಸಲಾಗಿದೆ.
ದೇವರ ಹಿಪ್ಪರಗಿ ತಾಲೂಕಿನ ಚಿಕ್ಕರೂಗಿ ಗ್ರಾಮ ಲೆಕ್ಕಾಧಿಕಾರಿ ಅಪ್ಪು ಅಗಸರ ಪಹಣಿ ಪತ್ರ ಬದಲಾಯಿಸಲು 13,500 ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಗಂಗನಳ್ಳಿ ನಿವಾಸಿ ಚಂದ್ರಕಾಂತ ಅಥಣಿ ಅವರಿಂದ ಲಂಚದ ಹಣ ಪಡೆದುಕೊಳ್ಳುವಂತೆ ಗ್ರಾಮ ಸಹಾಯಕನಿಗೆ ಅಗಸರ ತಿಳಿಸಿದ್ದರು ಎನ್ನಲಾಗಿದೆ.
ತಾಯಿ ಹೆಸರಿನಿಂದ ಮಕ್ಕಳ ಹೆಸರಿಗೆ 8 ಎಕರೆ ಜಮೀನಿನ ಪಹಣಿ ಪತ್ರ ಬದಲಾಯಿಸಲು 13,500 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಕುರಿತು ನಿನ್ನೆ(ಸೆ.2) ಎಸಿಬಿಗೆ ಚಂದ್ರಕಾಂತ ದೂರು ನೀಡಿದ್ದರು. ಈ ದೂರು ಆಧರಿಸಿ ದಾಳಿ ನಡೆಸಿದ್ದಾರೆ. ಎಸಿಬಿ ಡಿ.ವೈ.ಎಸ್.ಪಿ ಮಂಜುನಾಥ ಗಂಗಲ್ ನೇತ್ವತ್ಥದಲ್ಲಿ ಸಿಪಿಐ ಪರಮೇಶ್ವರ, ಹರಿಶ್ವಂದ್ರ ಹಾಗೂ ಸಿಬ್ಬಂದಿಯಿಂದ ದಾಳಿಯಲ್ಲಿ ಪಾಲ್ಗೊಂಡಿದ್ದರು.