ಕರ್ನಾಟಕ

karnataka

ETV Bharat / state

ಹುದ್ದೆಗಳ ನೇಮಕಾತಿ ಅವಧಿ ವಿಸ್ತರಿಸುವಂತೆ ಒತ್ತಾಯ - ಪದವೀಧರ ಹುದ್ದೆಗಳ ನೇಮಕಾತಿ

ರಾಜ್ಯ ಹಾಗೂ‌‌‌ ಕೇಂದ್ರ ಸರ್ಕಾರ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಪದವೀಧರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಕೊರೊನಾ ಹಿನ್ನೆಲೆ ಪದವೀಧರ ಹುದ್ದೆಗಳ ನೇಮಕಾತಿ ಅವಧಿ ವಿಸ್ತರಿಸುವಂತೆ ಎಬಿವಿಪಿ ಕಾರ್ಯಕರ್ತರು ಮನವಿ ಸಲ್ಲಿಸಿದರು.

Abvp protest
Abvp protest

By

Published : Jul 23, 2020, 3:13 PM IST

ವಿಜಯಪುರ: ಪದವೀಧರ ಹುದ್ದೆಗಳ ನೇಮಕಾತಿ ಅವಧಿ ವಿಸ್ತರಿಸುವಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಕೊರೊನಾ‌ ಭೀತಿಯಿಂದ ಪದವಿ ಪರೀಕ್ಷೆಗಳು ಇನ್ನೂ ನಡೆದಿಲ್ಲ. ಪ್ರತಿ ವರ್ಷ ಮೇ ಅಂತ್ಯಕ್ಕೆ ಎಲ್ಲಾ ಪರೀಕ್ಷೆಗಳು ಮುಗಿದು ಜೂನ್​​ನಲ್ಲಿ ಫಲಿತಾಂಶ ಪ್ರಕಟವಾಗುತ್ತಿತ್ತು. ಆದ್ರೆ ಕೊರೊನಾದಿಂದ ಪರೀಕ್ಷೆಗಳು ನಡೆದಿಲ್ಲ. ರಾಜ್ಯ ಹಾಗೂ‌‌‌ ಕೇಂದ್ರ ಸರ್ಕಾರ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಪದವೀಧರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿದೆ‌. ಆದ್ರೆ ಇನ್ನೂ ಪದವಿ ಅಂತಿಮ ವರ್ಷದ ಪರೀಕ್ಷೆಗಳು ನಡೆಯದ ಕಾರಣ ಅನೇಕ ವಿದ್ಯಾರ್ಥಿಗಳಿಗೆ ಅನ್ಯಾಯವಾಗುವ ಸಾಧ್ಯತೆ ಇದೆ. ಹೀಗಾಗಿ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ ಮಾಡಲು ಜಿಲ್ಲಾಧಿಕಾರಿಗೆ ಮನವಿ ಮಾಡಿದರು‌.

ಪದವಿ ಪರೀಕ್ಷೆಗಳು ಮುಗಿಯದ ಹಿನ್ನೆಲೆ ವಿವಿಧ ಸರ್ಕಾರಿ ಹುದ್ದೆ ಪಡೆಯಬೇಕು ಎಂದು ಕನಸು ಹೊತ್ತ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಹಾಗಾಗಿ ಸರ್ಕಾರ ಹುದ್ದೆಗಳ ಭರ್ತಿ ಅವಧಿ ವಿಸ್ತರಿಸಬೇಕು ಎಂದು ಎಬಿವಿಪಿ ಕಾರ್ಯಕರ್ತರು ಒತ್ತಾಯಿಸಿದರು.

ABOUT THE AUTHOR

...view details