ಕರ್ನಾಟಕ

karnataka

ETV Bharat / state

ಆರ್‌ಸಿಯು ವಿವಿಯ ಪರೀಕ್ಷೆ ಮುಂದೂಡಲು ಮನವಿ - ವಿಜಯಪುರ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಸಂಘಟನೆ

ನವೆಂಬರ್ 18ರಂದು ನಡೆಯುವ ರಾಣಿ ಚೆನ್ನಮ್ಮ ವಿವಿಯ ಪರೀಕ್ಷೆಗಳನ್ನು ಮುಂದೂಡುವಂತೆ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಸಂಘಟನೆ ಸದಸ್ಯರು ಜಿಲ್ಲಾಧಿಕಾರಿಗಳ ಮೂಲಕ ಅರ್‌ಸಿಯು ಕುಲಪತಿ ಪ್ರೊ. ರಾಮಚಂದ್ರಗೌಡ  ಅವರಿಗೆ ಮನವಿ ಸಲ್ಲಿಸಿದರು.

ನ.17ರಂದು ಸಿವಿಲ್ ಪೊಲೀಸ್​ ಪರೀಕ್ಷೆ ಹಿನ್ನೆಲೆ: ಆರ್‌ಸಿಯು ವಿವಿಯ ಪರೀಕ್ಷೆ ಮುಂದೂಡಲು ಎಬಿವಿಪಿ ಮನವಿ

By

Published : Nov 13, 2019, 5:04 PM IST

ವಿಜಯಪುರ: ನವೆಂಬರ್ 18ರಂದು ನಡೆಯುವ ರಾಣಿ ಚೆನ್ನಮ್ಮ ವಿವಿಯ ಪರೀಕ್ಷೆಗಳನ್ನು ಮುಂದೂಡುವಂತೆ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಸಂಘಟನೆ ಸದಸ್ಯರು ಜಿಲ್ಲಾಧಿಕಾರಿಗಳ ಮೂಲಕ ಅರ್‌ಸಿಯು ಕುಲಪತಿ ಪ್ರೊ. ರಾಮಚಂದ್ರಗೌಡ ಅವರಿಗೆ ಮನವಿ ಸಲ್ಲಿಸಿದರು.

ನ.17ರಂದು ಸಿವಿಲ್ ಪೊಲೀಸ್​ ಪರೀಕ್ಷೆ ಹಿನ್ನೆಲೆ: ಆರ್‌ಸಿಯು ವಿವಿಯ ಪರೀಕ್ಷೆ ಮುಂದೂಡಲು ಎಬಿವಿಪಿ ಮನ

ನ. 17 ಸಿವಿಲ್ ಪೊಲೀಸ್​ ಪರೀಕ್ಷೆ ನಡೆಯಲಿದೆ. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪದವಿ, ಸ್ನಾತಕೋತ್ತರ ಕೇಂದ್ರಗಳ ಅನೇಕ ವಿದ್ಯಾರ್ಥಿಗಳು ಈ ಸಿವಿಲ್ ಪರೀಕ್ಷೆಗೆ ಹಾಜರಾಗುತ್ತಿದ್ದಾರೆ. ನ. 18ರಂದು ರಾಣಿ ಚೆನ್ನಮ್ಮ ವಿವಿಯ ಪರೀಕ್ಷೆಗಳು ಇರುವುದಿಂದ‌ ವಿದ್ಯಾರ್ಥಿಗಳಿಗೆ ಎರಡೂ ಪರೀಕ್ಷೆಗಳನ್ನು ಎದುರಿಸಲು ಕಷ್ಟವಾಗುತ್ತದೆ. ಹಾಗಾಗಿ 18ರಂದು ನಡೆಯುವ ರಾಣಿ ಚನ್ನಮ್ಮ ವಿವಿಯ ಪರೀಕ್ಷೆಗಳನ್ನು ಮುಂದೂಡುವಂತೆ ಕೋರಿ ಜಿಲ್ಲಾಧಿಕಾರಿಗಳ ಮೂಲಕ ಎಬಿವಿಪಿ ಸಂಘಟನೆ ವಿದ್ಯಾರ್ಥಿಗಳು ರಾಣಿ ಚೆನ್ನಮ್ಮ ವಿವಿ ಕುಲಪತಿ ಪ್ರೊ. ರಾಮಚಂದ್ರಗೌಡ ಅವರಿಗೆ ಮನವಿ ಸಲ್ಲಿಸಿದರು.

ಜಿಲ್ಲಾಧಿಕಾರಿಗಳ ಪರವಾಗಿ ಮನವಿ ಸ್ವೀಕರಿಸಿದ ತಹಶೀಲ್ದಾರರು, ತಕ್ಷವೇ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ತಮ್ಮ ಸಮಸ್ಯೆ ಪರಿಹರಿಸುವುದಾಗಿ ಎಬಿವಿಪಿ ಸಂಘಟನೆ ಹಾಗೂ ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು.

ABOUT THE AUTHOR

...view details