ವಿಜಯಪುರ :ವಿಜಯಪುರದ ಐತಿಹಾಸಿಕ ಪ್ರವಾಸಿ ತಾಣವಾದ ಗೋಲ್ ಗುಂಬಜ್ಗೆ ಇಂದು ಜ್ಯೋತಿಷಿ ಆನಂದ ಗುರೂಜೀ ಭೇಟಿ ನೀಡಿದ್ರು.
ಗುಮ್ಮಟ ನಗರಿಯ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ ಆನಂದ ಗುರೂಜೀ - ಮಹರ್ಷಿ ಆನಂದ ಗುರೂಜೀ
ವಿಜಯಪುರದ ಐತಿಹಾಸಿಕ ಪ್ರವಾಸಿ ತಾಣವಾದ ಗೋಲ್ ಗುಂಬಜ್ಗೆ ಇಂದು ಜ್ಯೋತಿಷಿ ಆನಂದ ಗುರೂಜಿ ಭೇಟಿ ನೀಡಿ ಗುಂಬಜ್ ಸೌಂದರ್ಯ ಸವಿದಿದ್ದಾರೆ.
ಆನಂದ ಗುರೂಜೀ
ಆದಿಲ್ ಶಾಹಿ ಕಾಲದಲ್ಲಿ ನಿರ್ಮಿಸಿದ ಐತಿಹಾಸಿಕ ಸ್ಮಾರಕ ಗೋಲ್ಗುಂಬಜ್ ಸ್ಮಾರಕ ನೋಡಲು ಗುರೂಜೀ ಬಂದ ವೇಳೆ, ಪ್ರವಾಸಿಗರು ಅವರ ಆಶೀರ್ವಾದ ಪಡೆಯಲು ಜನರು ಮುಗಿಬಿದ್ದರು. ಇದೇ ವೇಳೆ ಗುರೂಜೀ ಭಕ್ತರನ್ನು ಆಶೀರ್ವದಿಸಿ, ಯೋಗ ಕ್ಷೇಮ ವಿಚಾರಿಸಿದ್ದಾರೆ.
ನಂತರ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಅಯ್ಯಪ್ಪ ಸ್ವಾಮಿ ಪೂಜೆ ನಿಮಿತ್ತ ನಾನು ಇಲ್ಲಿಗೆ ಬಂದಿರುವೆ. ಹಾಗೆಯೇ ಇಲ್ಲಿನ ಸ್ಮಾರಕವನ್ನು ವೀಕ್ಷಿಸಲು ಬಂದಿದ್ದೇನೆ. ಇಂತಹ ಮೈಸುಡುವ ಬಿಸಿಲಿನಲ್ಲಿ ಜನರು ಗುಮ್ಮಟ ವೀಕ್ಷಿಸಲು ಬರುತ್ತಿರೋದು ಸಂತೋಷದ ವಿಚಾರ ಎಂದರು.