ಕರ್ನಾಟಕ

karnataka

ETV Bharat / state

ಬೆತ್ತಲಾಗಿ ಓಡಾಡುತ್ತಿದ್ದ ಮಾನಸಿಕ ಅಸ್ವಸ್ಥನಿಗೆ ತನ್ನ ಅಂಗಿ ಬಿಚ್ಚಿ ತೊಡಿಸಿದ ಯುವಕ..! - A young man in Vijayapura dressed as a mentally ill

ಸೀಲ್​​​ಡೌನ್ ಪ್ರದೇಶದಲ್ಲಿ ಬೆತ್ತಲಾಗಿ ಓಡಾಡುತ್ತಿದ್ದ ಮಾನಸಿಕ ಅಸ್ವಸ್ಥ ವ್ಯಕ್ತಿಗೆ, ಸ್ಥಳೀಯ ಯುವಕನೊಬ್ಬ ತನ್ನ ಅಂಗಿ ಬಿಚ್ಚಿ ತೊಡಿಸಿದ್ದು, ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

A young man in Vijayapura dressed as a mentally ill
ಬೆತ್ತಲಾಗಿ ಓಡಾಡ್ತಿದ್ದ ಮಾನಸಿಕ ಅಸ್ವಸ್ಥನಿಗೆ ಅಂಗಿ ಬಿಚ್ಚಿ ತೊಡಿಸಿದ ಯುವಕ..!

By

Published : Apr 15, 2020, 10:16 AM IST

ವಿಜಯಪುರ: ಬೆತ್ತಲಾಗಿ ನಡು ರಸ್ತೆಯಲ್ಲಿ ಓಡಾಡುತ್ತಿದ್ದ ಮಾನಸಿಕ ಅಸ್ವಸ್ಥ ವ್ಯಕ್ತಿಗೆ, ಸ್ಥಳೀಯ ಯುವಕನೊಬ್ಬ ತನ್ನ ಅಂಗಿ ಬಿಚ್ಚಿಕೊಟ್ಟು ಮಾನವೀಯತೆ ಮೆರೆದ ಘಟನೆ ವಿಜಯಪುರ ನಗರದಲ್ಲಿ ನಡೆದಿದೆ. ನಗರದ ಸ್ಟೇಷನ್ ರಸ್ತೆಯ ಬಡೆ ಕಮಾನ್ ಹತ್ತಿರ ಸೀಲ್​​​ಡೌನ್ ಪ್ರದೇಶದಲ್ಲಿ, ಮಾನಸಿಕ‌ ಅಸ್ವಸ್ಥನೊಬ್ಬ ಬೆತ್ತಲೆಯಾಗಿ ಓಡಾಡುತ್ತಿದ್ದ.

ಬೆತ್ತಲಾಗಿ ಓಡಾಡುತ್ತಿದ್ದ ಮಾನಸಿಕ ಅಸ್ವಸ್ಥನಿಗೆ ಅಂಗಿ ಬಿಚ್ಚಿ ತೊಡಿಸಿದ ಯುವಕ..!

ಇದನ್ನು ಗಮನಿಸಿ ಸ್ಥಳದಲ್ಲಿದ್ದ ಪೊಲೀಸರು ಆತನನ್ನು ತಡೆಯಲು ಪ್ರಯತ್ನಿಸಿದಾಗ, ಆತ ಓಡಲು ಪ್ರಯತ್ನಿದ. ಬಳಿಕ ಬೈಕ್ ಮೇಲೆ ಹೋಗುತ್ತಿರುವ ಯುವಕನೊಬ್ಬ ತನ್ನ ಅಂಗಿಯನ್ನು ತೆಗೆದು ಮಾನಸಿಕ ಅಸ್ವಸ್ಥನಿಗೆ ತೊಡಿಸಲು ಮುಂದಾದಾಗ, ಪ್ರೋಬೇಷನರ್ ಪಿಎಸ್‌ಐ ಸೋಮನಗೌಡ ಹಾಗೂ ಪೊಲೀಸ್ ಸಿಬ್ಬಂದಿ ಆತನಿಗೆ ಬಟ್ಟೆ ಹಾಕಿ ಕಳುಹಿಸಿದ್ದಾರೆ.

ABOUT THE AUTHOR

...view details