ವಿಜಯಪುರ:ಇಂದು ಸಂಭ್ರಮದ ಹೋಳಿ ಹಬ್ಬ. ಈ ಸಡಗರದಲ್ಲಿದ್ದ ಬಾಲಕ ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿದ್ದ ಘಟನೆ ವಿಜಯಪುರದಲ್ಲಿ ನಡೆದಿದೆ. ಜಿಲ್ಲೆಯ ಕೊಲ್ಹಾರ ತಾಲೂಕಿನ ತಳೇವಾಡ ಗ್ರಾಮದ ಹಣಮಂತಪ್ಪ ಬೀರಪ್ಪ ವಾಲೀಕಾರ್(12)ಮೃತಪಟ್ಟ ದುರ್ದೈವಿ.
ಬಾಲಕ ಹಣಮಂತಪ್ಪ ಹೋಳಿ ಆಡುತ್ತಿದ್ದಾಗ ನೀರು ತುಂಬಿಸಿಕೊಳ್ಳಲು ಗ್ರಾಮ ಪಂಚಾಯತಿ ನಿರ್ಮಿಸಿರುವ ನೀರಿನ ಟ್ಯಾಂಕ್ ಬಳಿ ಹೋದಾಗ ವಿದ್ಯುತ್ ತಂತಿ ಸ್ಪರ್ಶಿಸಿದೆ.