ಕರ್ನಾಟಕ

karnataka

ETV Bharat / state

ಥರ್ಮಾಕೋಲ್​ನಲ್ಲಿ ನಿರ್ಮಾಣವಾದ 10 ಅಡಿ ಉದ್ದದ ಕೇದಾರನಾಥ ದೇವಸ್ಥಾನ - ಥರ್ಮಾಕೋಲ್​ನಲ್ಲಿ ಕೇದಾರನಾಥ ದೇವಸ್ಥಾನ

ಗಣೇಶೋತ್ಸವ ಅಂಗವಾಗಿ ಥರ್ಮಾಕೋಲ್​ನಲ್ಲಿ ಕೇದಾರನಾಥ ದೇವಸ್ಥಾನದ ಕಲಾಕೃತಿಯನ್ನು ವಿಜಯಪುರದ ಯುವಕ ನಿರ್ಮಿಸಿದ್ದಾರೆ.

Kn_vjp_02_kedanath_temple_story_Pkg_KA10055
ಥರ್ಮಾಕೋಲ್​ನಿಂದ​ ಕೇದಾರನಾಥ ದೇವಸ್ಥಾನ ಕಲಾಕೃತಿ

By

Published : Sep 1, 2022, 5:19 PM IST

ವಿಜಯಪುರ:18 ವರ್ಷದ ಯುಕನೋರ್ವ ಗಣೇಶೋತ್ಸವ ಪ್ರಯುಕ್ತ ಥರ್ಮಕೋಲ್​ನಲ್ಲಿ ಉತ್ತರಾಖಂಡ ರಾಜ್ಯದ ರುದ್ರಪ್ರಯಾಗ ಜಿಲ್ಲೆಯ ಪುಣ್ಯಕ್ಷೇತ್ರ ಕೇದಾರನಾಥ ದೇವಸ್ಥಾನದ ಪ್ರತಿಕೃತಿ ನಿರ್ಮಿಸಿ ಗಮನ ಸೆಳೆದಿದ್ದಾರೆ.

ವೃತ್ತಿಯಲ್ಲಿ ಟೈಲರಿಂಗ್ ಮಾಡ್ತಾ ಇರುವ 18 ವರ್ಷದ ಶಂಕರ್​ ಸುರೇಶ್​ ಎನ್ನುವ ಯುವಕ ಗಣೇಶೋತ್ಸವ ಅಂಗವಾಗಿ ಥರ್ಮಾಕೋಲ್​ನಲ್ಲಿ ಕೇದಾರ್​ನಾಥ್ ದೇವಸ್ಥಾನವನ್ನು ನಿರ್ಮಿಸಿದ್ದು, 10 ಅಡಿ ಉದ್ದ 7 ಅಡಿ ಅಗಲವಿರುವ ಕಲಾಕೃತಿ ಇದಾಗಿದೆ. ನಗರದ ಶ್ರೀವಿಠ್ಠಲ ರುಕ್ಮಿಣಿ ದೇವಸ್ಥಾನದಲ್ಲಿ ಪ್ರದರ್ಶನಕ್ಕಿಡಲಾಗಿದೆ. ಕಳೆದ ವರ್ಷ ಗಣೇಶೋತ್ಸವಕ್ಕೆ ಸುರೇಶ್​ ಥರ್ಮಕೋಲ್​ನಲ್ಲಿ​ ಆಯೋಧ್ಯ ರಾಮ ಮಂದಿರವನ್ನು ನಿರ್ಮಿಸಿ ಜನರ ಮೆಚ್ಚುಗೆ ಪಾತ್ರರಾಗಿದ್ದರು.

ಥರ್ಮಾಕೋಲ್​ನಿಂದ​ ಕೇದಾರನಾಥ ದೇವಸ್ಥಾನ ಕಲಾಕೃತಿ

ಇನ್ನು, ಈ ಕಲಾಕೃತಿ ನಿರ್ಮಾಣಕ್ಕಾಗಿ ಸುರೇಶ್​ ಒಂದು ತಿಂಗಳು ಸಮಯವನ್ನು ತೆಗೆದುಕೊಂಡಿದ್ದು, ಕಲಾಕೃತಿ ನಿರ್ಮಾಣಕ್ಕೆ ದರ್ಗಾದ ಗಣೇಶ ಮಂಡಳಿ ಪದಾಧಿಕಾರಿಗಳು ಸಹಾಯ, ಸಹಕಾರ ನೀಡಿದ್ದಾಗಿ ಸುರೇಶ್​ ತಿಳಿಸಿದ್ದಾರೆ.

ಇದನ್ನೂ ಓದಿ:ಕರಾವಳಿಯಲ್ಲಿ ಕಳೆಗಟ್ಟಿದ ಗಣೇಶ ಚತುರ್ಥಿ: ಗಣಪನ ಜೊತೆ ಗಮನ ಸೆಳೆದ ಪುನೀತ್​ ರಾಜ್​ಕುಮಾರ್ ಮೂರ್ತಿ

ABOUT THE AUTHOR

...view details