ಕರ್ನಾಟಕ

karnataka

ದನದ ಕೊಟ್ಟಿಗೆಯಂತಾದ ಸರ್ಕಾರಿ ಶಾಲೆ... ಅನುದಾನದ ಹಣ ಮಂಗಮಾಯ!

By

Published : Apr 26, 2019, 8:55 PM IST

ತಾವು ಕಟ್ಟಿಸಿದ ಶಾಲೆಯ ಕೊಠಡಿಗಳಿಗೆ ಸರ್ಕಾರಿ ಅನುದಾನ ನೀಡಿಲ್ಲವೆಂದು ವ್ಯಕ್ತಿಯೊಬ್ಬರು ವಿಜಯಪುರ ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಯಲ್ಲಿ ದನದ ಮೇವು ಸಂಗ್ರಹಿಸಿದ್ದಾರೆ.

ವಿಜಯಪುರ

ವಿಜಯಪುರ: ಎಷ್ಟೋ ಸರ್ಕಾರಿ ಶಾಲೆಗಳಿಗೆ ಸರಿಯಾದ ಅನುದಾನ ದೊರೆಯದೆ ಅವನತಿಯ ಹಾದಿ ಹಿಡಿದಿವೆ. ಈ ಮಧ್ಯೆ ಸರ್ಕಾರ ನೀಡಿದ ಅನುದಾನವನ್ನು ಸರಿಯಾಗಿ ಬಳಸಿಕೊಳ್ಳದೆ ಇಲ್ಲಿನ ಶಾಲೆಯೊಂದು ದನದ ಕೊಟ್ಟಿಗೆಯಾಗಿ ಪರಿವರ್ತನೆ ಹೊಂದಿದೆ.

ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆ ಹೀನಾಯ ಸ್ಥಿತಿಗೆ ತಲುಪಿದೆ. 2011ರಲ್ಲಿ ಶಾಲೆಯ 4 ಕೋಣೆಗಳ ನಿರ್ಮಾಣಕ್ಕೆ ಸರ್ಕಾರ 4 ಲಕ್ಷದ 60 ಸಾವಿರ ರೂ. ಬಿಡುಗಡೆ ಮಾಡಲಾಗಿತ್ತು. ಆದರೆ ಆ ಮೊದಲೇ ಕೊಠಡಿಗಳನ್ನು ನಿರ್ಮಿಸಿ, ಅನುದಾನಕ್ಕಾಗಿ ಕಾಯುತ್ತಿದ್ದ ಮಲ್ಲನಗೌಡ ಬಿರಾದಾರ ಎಂಬುವರಿಗೆ ಈ ಹಣ ಸಂಪೂರ್ಣವಾಗಿ ಕೈ ಸೇರಿಲ್ಲ ಎನ್ನಲಾಗಿದೆ. ಇದರಿಂದ ಬೇಸತ್ತ ಬಿರಾದಾರ ಇನ್ನೂ ಕೊಠಡಿಗಳನ್ನು ಶಾಲಾ ಆಡಳಿತಕ್ಕೆ ಒಪ್ಪಿಸಿಲ್ಲ.

ವಿಜಯಪುರ

ಅಲ್ಲದೆ, 8 ವರ್ಷ ಕಳೆದರೂ ಶಾಲೆಯ ಆಡಳಿತ ಮಂಡಳಿ ಆ ಕೊಠಡಿಗಳನ್ನು ತನ್ನ ಸ್ವಾಧೀನಕ್ಕೆ ಪಡೆದುಕೊಳ್ಳುವ ಗೋಜಿಗೂ ಹೋಗಿಲ್ಲ. ಹೀಗಾಗಿ ಮಲ್ಲನಗೌಡ ಬಿರಾದಾರ ಅವರು ಶಾಲೆಯಲ್ಲಿ ದನದ ಮೇವು, ಹೊಟ್ಟು ಇಟ್ಟುಕೊಂಡಿದ್ದಾರೆ. ವಿಪರ್ಯಾಸವೆಂದರೆ, ಈ ಬಗ್ಗೆ ಯಾವ ಆಧಿಕಾರಿಯೂ ಚಕಾರವೆತ್ತಿಲ್ಲ. ನಾನು ಖರ್ಚು ಮಾಡಿದ ದುಡ್ಡು ಸಿಕ್ರೆ ಸಾಕು. ಈಗಲೇ ಶಾಲೆಯನ್ನು ಹೆಡ್​ಮಾಸ್ಟರ್ ಅವರಿಗೆ ಕೊಟ್ಟುಬಿಡ್ತೀನಿ ಎಂದು ಮಲ್ಲನಗೌಡ ಬಿರಾದಾರ ಹೇಳಿದ್ದಾರೆ.

ಇನ್ನು ಶಾಲೆ ದುಸ್ಥಿತಿ ನೋಡಿದರೆ, ಗೋಡೆಗಳು ಅಲ್ಲಲ್ಲಿ ಬಿರುಕು ಬಿಟ್ಟಿವೆ. ಕೊಠಡಿಗಳ ಕೊರತೆ ಎದುರಾಗಿದೆ. ಇಷ್ಟೆಲ್ಲಾ ದುರ್ಗತಿ ಬಂದೊದಗಿದ್ದರೂ ಬಿಇಓ ಆಗಲಿ, ಎಸ್​ಡಿಎಂಸಿ ಸದಸ್ಯರಾಗಲೀ ಈ ಸಮಸ್ಯೆ ಬಗೆಹರಿಸುವ ಗೋಜಿಗೇ ಹೋಗಿಲ್ಲ ಎನ್ನಲಾಗಿದೆ. ಶಾಲೆಗೆ ನೀಡಲಾದ ಅನುದಾನವನ್ನು ಹೆಡ್​ ಮಾಸ್ಟರ್​​ ಕೊಳ್ಳೆ ಹೊಡೆದಿದ್ದಾರೆ ಎಂಬ ಆರೋಪ ಕೂಡ ಕೇಳಿ ಬಂದಿದೆ.

For All Latest Updates

TAGGED:

ABOUT THE AUTHOR

...view details