ಕರ್ನಾಟಕ

karnataka

ETV Bharat / state

ಟೈರ್​ ಸ್ಫೋಟಗೊಂಡು ಹೊತ್ತಿ ಉರಿದ ಖಾಸಗಿ ಬಸ್​: ಚಾಲಕನ ಸಮಯಪ್ರಜ್ಞೆಯಿಂದ 36 ಜನ ಪ್ರಯಾಣಿಕರು ಸೇಫ್​.. - ಖಾಸಗಿ ಬಸ್​ ಬೆಂಕಿ ಅವಘಡ

ಟೈರ್​ ಸ್ಫೋಟಗೊಂಡು ಚಲಿಸುತ್ತಿದ್ದ ಖಾಸಗಿ​ ಬಸ್ ​ಸುಟ್ಟು ಕರಕಲಾಗಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.

ಟೈರ್​ ಸ್ಫೋಟಗೊಂಡು ಹೊತ್ತಿಉರಿದ ಖಾಸಗಿ ಬಸ್​
ಟೈರ್​ ಸ್ಫೋಟಗೊಂಡು ಹೊತ್ತಿಉರಿದ ಖಾಸಗಿ ಬಸ್​

By ETV Bharat Karnataka Team

Published : Dec 15, 2023, 12:12 PM IST

Updated : Dec 15, 2023, 12:53 PM IST

ಟೈರ್​ ಸ್ಫೋಟಗೊಂಡು ಹೊತ್ತಿ ಉರಿದ ಖಾಸಗಿ ಬಸ್​: ಚಾಲಕನ ಸಮಯಪ್ರಜ್ಞೆಯಿಂದ 36 ಜನ ಪ್ರಯಾಣಿಕರು ಸೇಫ್​..

ವಿಜಯಪುರ: ಬೆಂಗಳೂರಿನಿಂದ ವಿಜಯಪುರಕ್ಕೆ ಆಗಮಿಸುತ್ತಿದ್ದ ಖಾಸಗಿ ಟ್ರಾವೆಲ್ಸ್​ಗೆ ಸೇರಿದ ಬಸ್​ವೊಂದರ ಟೈರ್​ ಸ್ಪೋಟಗೊಂಡು ಸಂಪೂರ್ಣ ಸುಟ್ಟು ಕರಕಲಾಗಿರುವ ಘಟನೆ ವಿಜಯಪುರ ತಾಲೂಕಿನ ಹಿಟ್ಟನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ ಐವತ್ತರಲ್ಲಿ ನಡೆದಿದೆ.

ಬಸ್​​ನ ಎಡಬದಿಯ ಹಿಂಭಾಗದ ಟೈರ್‌ ಸ್ಪೋಟದ ಕಾರಣದಿಂದಾಗಿ ಕಿಡಿ ಹೊತ್ತಿಕೊಂಡು ಬೆಂಕಿಯ ಕೆನ್ನಾಲಿಗೆ ವ್ಯಾಪಿಸಿ ಅವಘಡ ಸಂಭವಿಸಿದೆ. ಬಸ್​​ನ ಚಕ್ರದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಚಾಲಕ ಬಸ್​ ಅನ್ನು ರಸ್ತೆ ಬದಿ ನಿಲ್ಲಿಸಿದ್ದಾನೆ. ಚಾಲಕನ ಸಮಯ ಪ್ರಜ್ಞೆಯಿಂದಾಗಿ ಎಲ್ಲ ಪ್ರಯಾಣಿಕರು ತಮ್ಮ ಲಗೇಜ್‌ ಸಮೇತ ಸುರಕ್ಷಿತವಾಗಿ ಕೆಳಗಿಳಿಯುವ ಮೂಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಸ್​ನ ಚಾಲಕ, ಕ್ಲೀನರ್‌, ಪ್ರಯಾಣಿಕರು ಮತ್ತು ದಾರಿಹೋಕ ಸ್ಥಳೀಯರ ನೆರವಿನಿಂದ ಬೆಂಕಿ ನಂದಿಸಲು ಯತ್ನಿಸಿದರಾದರೂ ಸಾಧ್ಯವಾಗಿಲ್ಲ. ಕ್ಷಣ ಮಾತ್ರದಲ್ಲಿ ಇಡೀ ಬಸ್​ಗೆ ಬೆಂಕಿ ವ್ಯಾಪಿಸಿ ಸಂಪೂರ್ಣ ಸುಟ್ಟು ಕರಕಲಾಗಿದೆ.

ಈ ಬಸ್​ನಲ್ಲಿ ಒಟ್ಟು 36 ಜನ ಪ್ರಯಾಣಿಕರು ಇದ್ದರು ಎನ್ನಲಾಗಿದೆ. ಎಲ್ಲರೂ ಸುರಕ್ಷಿತವಾಗಿ ಬಸ್​​ನಿಂದ ಇಳಿದು ಪಾರಾಗಿದ್ದಾರೆ. ಇಂದು ಬೆಳಗ್ಗೆ 6.30ಕ್ಕೆ ಘಟನೆ ನಡೆದಿದೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ವಿಜಯಪುರ ಹಾಗೂ ಬಸವನ ಬಾಗೇವಾಡಿಯ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹೈವೇ ಪೆಟ್ರೋಲಿಂಗ್ ವಾಹನ, ಆಂಬ್ಯುಲೆನ್ಸ್ ಗಳಿಂದಲೂ ಕಾರ್ಯಾಚರಣೆ ನಡೆಸಲಾಗಿದೆ. ಘಟನೆಯಿಂದಾಗಿ ಕೆಲಕಾಲ ರಾಷ್ಟ್ರೀಯ ಹೆದ್ದಾರಿ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತಾದರೂ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿ ಸೂಕ್ತ ಸಂಚಾರಿ ಕ್ರಮಗಳನ್ನ ಜರುಗಿಸುವ ಮೂಲಕ ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಘಟನೆಯಲ್ಲಿ ಸುಟ್ಟು ಕರಕಲಾದ ಈ ಬಸ್​ನ ವಿಮೆ ಡಿಸೆಂಬರ್ 24ಕ್ಕೆ ಅಂತ್ಯವಾಗಲಿತ್ತು ಎಂದು ತಿಳಿದುಬಂದಿದ್ದು, ಇನ್ನೂ ಹತ್ತು ದಿನ ಇನ್ಸುರೆನ್ಸ್ ಇರುವಾಗಲೇ ಬಸ್ ಸುಟ್ಟು ಭಸ್ಮವಾದ ಘಟನೆ ಜರುಗಿದೆ.

ಚಿಕ್ಕೋಡಿಯಲ್ಲೂ ಇಂತಹದ್ದೇ ಘಟನೆ:ಚಲಿಸುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್​​ವೊಂದರ ಎಂಜಿನ್​ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡ ಘಟನೆ ಕೆಲ ದಿನಗಳ ಹಿಂದೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನರಸಿಂಗಪೂರ‌ ಗ್ರಾಮದ ಬಳಿ ಶನಿವಾರ ನಡೆದಿತ್ತು. ಸಂಜೆ ಹುಕ್ಕೇರಿ ಪಟ್ಟಣಕ್ಕೆ ಬಸ್ ಆಗಮಿಸುತ್ತಿದ್ದ ವೇಳೆ ಇಂಜಿನ್ ಭಾಗದಲ್ಲಿ ಹಠಾತ್ತನೆ​ ಬೆಂಕಿ ಕಾಣಿಸಿಕೊಂಡಿತ್ತು, ಚಾಲಕನ ಸಮಯಪ್ರಜ್ಞೆಯಿಂದ 20ಕ್ಕೂ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದರು.

ಇದನ್ನೂ ಓದಿ:ಕಲಬುರಗಿ: ನಿಂತಿದ್ದ 2 ಖಾಸಗಿ ಬಸ್​ಗಳಿಗೆ ಬೆಂಕಿ ತಗುಲಿ ಸುಟ್ಟು ಕರಕಲು

Last Updated : Dec 15, 2023, 12:53 PM IST

ABOUT THE AUTHOR

...view details