ವಿಜಯಪುರ:ಕೊರೊನಾ ವಿರುದ್ಧದ ಹೋರಾಟದಲ್ಲಿ ಹಗಲು-ರಾತ್ರಿಯೆನ್ನದೆ ಹೋರಾಟ ನಡೆಸುತ್ತಿರುವ ಪೊಲೀಸರು ತಮ್ಮ ಕರ್ತವ್ಯದ ವೇಳೆಯಲ್ಲೂ ಬಿಡಾಡಿ ದನಗಳಿಗೆ ಕಲ್ಲಂಗಡಿ ಹಣ್ಣು ತಿನ್ನಿಸುವುದರ ಮೂಲಕ ಪೊಲೀಸರು ಮಾನವೀಯತೆಯ ಮೆರೆದಿದ್ದಾರೆ.
ಕರ್ತವ್ಯದ ನಡುವೆಯೂ ಮಾನವೀಯತೆ ಮೆರೆದ ಪೊಲೀಸರು
ಚಪ್ಪರ ಬಂದ್ ಬಡಾವಣೆ ಮುಂಭಾಗದಲ್ಲಿ ವ್ಯಾಪಾರಕ್ಕೆಂದು ತಂದ ಕಲ್ಲಂಗಡಿ ಹಣ್ಣನ್ನು ಸೀಲ್ಡೌನ್ ಕಾರಣದಿಂದ ಮಾರಾಟವಾಗದೇ ರಸ್ತೆ ಪಕ್ಕದಲ್ಲಿ ಇಡಲಾಗಿತ್ತು. ಅದನ್ನು ಬಿಡಾಡಿ ದನಗಳಿಗೆ ಹಾಕಿ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.
ನಗರದ ಸ್ಟೇಷನ್ ರಸ್ತೆಯ ಚಪ್ಪರ ಬಂದ್ ಬಡಾವಣೆ ಮುಂಭಾಗದಲ್ಲಿ ವ್ಯಾಪಾರಕ್ಕೆ ಎಂದು ತಂದ ಕಲ್ಲಂಗಡಿ ಹಣ್ಣನ್ನು ಸೀಲ್ಡೌನ್ ಕಾರಣದಿಂದ ಮಾರಾಟವಾಗದೇ ರಸ್ತೆ ಪಕ್ಕದಲ್ಲಿ ಇಡಲಾಗಿತ್ತು. ಕಲ್ಲಂಗಡಿ ರಾಶಿಯನ್ನ ಗಮನಿಸಿದ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಕಲ್ಲಂಗಡಿ ಹಣ್ಣು ಒಡೆದು ಬಿಡಾಡಿ ದನಗಳಿಗೆ ಹಾಕಿದ್ದಾರೆ.
ಇನ್ನೂ ಕಳೆದ ಒಂದು ವಾರದಿಂದ ಕಲ್ಲಂಗಡಿ ಹಣ್ಣುಗಳು ಸ್ಟಷನ್ ರಸ್ತೆ ಪಕ್ಕದಲ್ಲಿದ್ದವು, ಸೀಲ್ ಡೌನ್ ಜಾರಿಯಾಗಿರುವುರಿಂದ ಕಲ್ಲಂಗಡಿ ಮಾಲೀಕ ಅವುಗಳನ್ನ ತೆಗೆದುಕೊಂಡು ಹೋಗಿಲ್ಲ. ಹೀಗಾಗಿ ಎರಡು ದಿನ ಕಳೆದರೆ ಹಣ್ಣುಗಳು ಕೊಳೆತು ಹೋಗಬಹುದು ಎಂದು ಕರ್ತವ್ಯ ನಿರತ ಪೊಲೀಸರು ಬಿಡಾಡಿ ದನಗಳನ್ನ ಕೆರೆದು ಅವುಗಳಿಗೆ ಕಲ್ಲಂಗಡಿ ಹಣ್ಣನ್ನು ತಿನ್ನಿಸಿದ್ದಾರೆ.