ವಿಜಯಪುರ: ಹೋಳಿ ಹಬ್ಬದ ದಿನದಂದೇ ನಗರದಲ್ಲಿ ರಕ್ತದ ಕೋಡಿ ಹರಿದಿದೆ. ಹಳೇ ವೈಷಮ್ಯದ ಹಿನ್ನೆಲೆ ವ್ಯಕ್ತಿವೋರ್ವನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮುದ್ದೇಬಿಹಾಳ ತಾಲೂಕಿನ ತಾಳಿಕೋಟಿ ಪಟ್ಟಣದಲ್ಲಿ ನಡೆದಿದೆ.
ಹಾಡಹಗಲೇ ವ್ಯಕ್ತಿಯ ಬರ್ಬರ ಹತ್ಯೆ... ತಾಳಿಕೋಟಿಯಲ್ಲಿ ರಕ್ತದೋಕುಳಿ - ಹಳೆ ವೈಷಮ್ಯ
ವಿಜಯಪುರ ಜಿಲ್ಲೆಯ ತಾಳಿಕೋಟಿಯಲ್ಲಿ ಹೋಳಿ ಹಬ್ಬದ ದಿನವೇ ನೆತ್ತರು ಹರಿದಿದೆ. ಹಳೇ ವೈಷಮ್ಯದ ಹಿನ್ನೆಲೆ ಹಾಡಹಗಲೇ ವ್ಯಕ್ತಿಯ ಬರ್ಬರ ಹತ್ಯೆಯಾಗಿದೆ.
ವಿಜಯಪುರದಲ್ಲಿ ಹಾಡಹಗಲೇ ವ್ಯಕ್ತಿಯ ಬರ್ಬರ ಹತ್ಯೆ
ಬಾಗಲಕೋಟೆಯ ನಿವಾಸಿ ಫಯಾಜ್ ಲೋಣಿ ಕೊಲೆಯಾದ ಯುವಕ. ಈತನನ್ನು ದುಷ್ಕರ್ಮಿಗಳು ತಾಳಿಕೋಟಿ ಪಟ್ಟಣದ ಕಿರಾಣಿ ಬಜಾರ್ ಬಳಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದಿದ್ದಾರೆ.
ಹಾಡಹಗಲೇ ಅಂಗಡಿಗೆ ನುಗ್ಗಿದ್ದ ದುಷ್ಕರ್ಮಿಗಳು ಏಕಾಏಕಿ ದಾಳಿ ನಡೆಸಿದರು ಎಂದು ತಿಳಿದುಬಂದಿದೆ. ಹತ್ಯೆಗೆ ಹಳೆ ದ್ವೇಷ ಕಾರಣವೆಂದು ಹೇಳಲಾಗ್ತಿದೆ. ಈ ಕುರಿತು ತಾಳಿಕೋಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.