ವಿಜಯಪುರ:ಜಿಲ್ಲೆಯಮುಸ್ಲಿಂ ವ್ಯಕ್ತಿಯೊಬ್ಬರು ಹನುಮಂತನ ಮಾಲಾ ಧರಿಸಿ ಹನುಮ ಜನ್ಮಭೂಮಿಯಾದ ಅಂಜನಾದ್ರಿ ಬೆಟ್ಟಕ್ಕೆ ಹೊರಡುವ ಮೂಲಕ ಭಾವೈಕ್ಯತೆ ಮೆರೆದಿದ್ದಾರೆ.
ಬಸವೇಶ್ವರ ಹುಟ್ಟಿದ ನಾಡು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ನರಸಲಗಿ ಗ್ರಾಮದ ಜಾಫರ್ ಬೆಣ್ಣೆ ಎಂಬವವರು ಹನುಮ ಮಾಲಾ ಧಾರಣೆ ಮಾಡಿದ್ದಾರೆ. ಹಣೆಗೆ ಗಂಧ, ತಿಲಕ ಇರಿಸಿ, ಕೇಸರಿ ವಸ್ತ್ರ ಧರಿಸಿ, ಕೊರಳಲ್ಲಿ ಹನುಮನ ಮಾಲಾ ಧರಿಸಿ, ಹನುಮ ಮಾಲಾ ದೀಕ್ಷೆ ಪಡೆದಿರುವ ಜಾಫರ್, ಜಾತಿಗಿಂತ ಭಾವೈಕ್ಯತೆ ದೊಡ್ಡದು ಎನ್ನುವುದನ್ನು ತೋರಿಸಿ ಕೊಟ್ಟಿದ್ದಾರೆ.