ವಿಜಯಪುರ: ಗರ್ಭಿಣಿಯನ್ನು ಆರೋಗ್ಯ ಕವಚ ವಾಹನದಲ್ಲಿ ಕರೆದೊಯ್ಯುತ್ತಿರುವಾಗ ಮಾರ್ಗ ಮಧ್ಯದಲ್ಲಿಯೇ ಹೆರಿಗೆ ಆಗಿರುವ ಘಟನೆ ಬಸವನ ಬಾಗೇವಾಡಿ ತಾಲೂಕಿನ ಹೊರವಲಯದಲ್ಲಿ ನಡೆದಿದೆ.
ಆರೋಗ್ಯ ಕವಚ ವಾಹನದಲ್ಲಿ ಮಗುವಿಗೆ ಜನ್ಮ - ಆ್ಯಂಬುಲೆನ್ಸ್ ನಲ್ಲಿ ಮಗುವಿಗೆ ಜನ್ಮ ನೀಡಿದ ತಾಯಿ
ಗರ್ಭಿಣಿಯನ್ನು ಆ್ಯಂಬುಲೆನ್ಸ್‌ನಲ್ಲಿ ಕರೆದೊಯ್ಯುತ್ತಿರುವಾಗ ಮಾರ್ಗ ಮಧ್ಯದಲ್ಲಿಯೇ ಹೆರಿಗೆ ಆದ ಘಟನೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಹೊರವಲಯದಲ್ಲಿ ನಡೆದಿದೆ.
![ಆರೋಗ್ಯ ಕವಚ ವಾಹನದಲ್ಲಿ ಮಗುವಿಗೆ ಜನ್ಮ Ambulance](https://etvbharatimages.akamaized.net/etvbharat/prod-images/768-512-11:36-kn-vjp-02-108van-delivery-av-7202140-12062020113026-1206f-1591941626-880.jpg)
Ambulance
ಫರ್ವಿನ್ ಚಪ್ಪರಬಂದ್ ಎಂಬ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆರೋಗ್ಯ ಕವಚ ವಾಹನದಲ್ಲಿ ಬಾಗೇವಾಡಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಗರ್ಭಿಣಿ ತೀವ್ರ ನೋವಿನಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಆ್ಯಂಬುಲೆನ್ಸ್ ಸಿಬ್ಬಂದಿ ವಾಹನದಲ್ಲೇ ಹೆರಿಗೆ ಮಾಡಿಸಿದ್ದಾರೆ.
ಹೆರಿಗೆ ಬಳಿಕ ಬಸವನ ಬಾಗೇವಾಡಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ತಾಯಿ, ಮಗು ಇಬ್ಬರು ಕ್ಷೇಮವಾಗಿದ್ದಾರೆ.
TAGGED:
Vijayapura ambulance news