ವಿಜಯಪುರ:ಆರೋಗ್ಯ ಕವಚ ವಾಹನದಲ್ಲೇ ಮಹಿಳೆಗೆ ಹೆರಿಗೆಯಾದ ಅಪರೂಪದ ಘಟನೆ ವಿಜಯಪುರ ತಾಲೂಕಿನ ಹಡಗಲಿ ಗ್ರಾಮದ ಬಳಿ ನಡೆದಿದೆ.
ಆಂಬ್ಯುಲೆನ್ಸ್ನಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ತಾಯಿ - ಎಮರ್ಜೆನ್ಸಿ ಮೆಡಿಕಲ್ ಟೆಕ್ನಿಶಿಯನ್
ದಿಲಶಾದ್ ಇಸ್ಮಾಯಿಲ್ ಹಚಡದ ಎಂಬ ಗರ್ಭಿಣಿ ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯದಲ್ಲಿಯೇ ಆಂಬ್ಯುಲೆನ್ಸ್ನಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಕಳೆದ ರಾತ್ರಿ ಹೆರಿಗೆ ನೋವಿನಿಂದ ಬಳಲುತಿದ್ದ ತುಂಬು ಗರ್ಭಿಣಿಗೆ ವಿಜಯಪುರ ತಾಲೂಕಿನ ಹಡಗಲಿ ಗ್ರಾಮದ ಬಳಿ ಆರೋಗ್ಯ ಕವಚ ವಾಹನದಲ್ಲೇ ಎಮರ್ಜೆನ್ಸಿ ಮೆಡಿಕಲ್ ಟೆಕ್ನಿಶಿಯನ್ ಹೆರಿಗೆ ಮಾಡಿಸಿದ್ದಾರೆ. ಹೆರಿಗೆ ಬಳಿಕ ತಾಯಿ-ಮಗು ಆರೋಗ್ಯವಾಗಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಕಲಬುರಗಿ ಜಿಲ್ಲೆ ಯಡ್ರಾಮಿ ತಾಲೂಕಿನ ಕಣಮೇಶ್ವರ ಗ್ರಾಮದ ದಿಲಶಾದ್ ಇಸ್ಮಾಯಿಲ್ ಹಚಡದ ಎಂಬ ಗರ್ಭಿಣಿಗೆ ಹೆರಿಗೆಯಾಗಿದ್ದು, ಗಂಡು ಮಗುಗೆ ಜನ್ಮ ನೀಡಿದ್ದಾಳೆ. ಹೆರಿಗೆ ನೋವಿನಿಂದ ಯಂಕಂಚಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಗಮಿಸಿದ್ದ ಗರ್ಭಿಣಿ, ಮೊದಲನೇ ಹೆರಿಗೆ ಸಿಸೇರಿಯನ್ ಆಗಿದ್ದರಿಂದ ಎರಡನೇಯದ್ದು ನಾರ್ಮಲ್ ಡೆಲಿವರಿ ಕಷ್ಟವೆಂದು ಜಿಲ್ಲಾ ಅಸ್ಪತ್ರೆಗೆ ರವಾನಿಸುವ ಮಾರ್ಗ ಮಧ್ಯದಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ. ಈ ವೇಳೆ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ 108ರ ಸಿಬ್ಬಂದಿ (ಎಮರ್ಜೆನ್ಸಿ ಮೆಡಿಕಲ್ ಟೆಕ್ನಿಶಿಯನ್) ಶೋಭಾ ಕೋಳಿ ಹಾಗೂ 108 ವಾಹನದ ಚಾಲಕ ಬಾವುರಾಜ ಮಂಗಳವೆಡೆ ಅವರಿಗೆ ದಿಲಶಾದ್ ಹಾಗೂ ಸಂಬಂಧಿಕರು ಧನ್ಯವಾದ ತಿಳಿಸಿದ್ದಾರೆ.