ವಿಜಯಪುರ:ವಿವಾಹಿತೆ ಮಹಿಳೆಯೊಬ್ಬರು ಲೈವ್ ವಿಡಿಯೋ ಮಾಡಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಬಬಲೇಶ್ವರ ತಾಲೂಕಿನ ಉಪ್ಪಲದಿನ್ನಿ ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಸುಹಾನ ಸೋನಾರ್ (21) ಆತ್ಮಹತ್ಯೆಗೆ ಶರಣಾದ ವಿವಾಹಿತೆ ಮಹಿಳೆ. ಏಪ್ರಿಲ್ 15ರಂದು ಲೈವ್ ವಿಡಿಯೋ ಮಾಡಿ ಸುಹಾನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆಗೂ ಮುನ್ನ ಮಾಡಿದ್ದ ಲೈವ್ ವಿಡಿಯೋದಲ್ಲಿ ಆತ್ಮಹತ್ಯೆ ಬಗ್ಗೆ ಮಾತನಾಡಿದ್ದಾರೆ. "ಪ್ರಿಯಕರ ಅಲ್ತಾಫ್ ಸಿಲೆಮಾನ್ ಬ್ಲ್ಯಾಕ್ಮೇಲ್ ಮಾಡುತ್ತಿದ್ದು, ತನ್ನೊಂದಿಗಿರುವ ನನ್ನ (ಸುಹಾನ) ಫೋಟೋವನ್ನು ಗಂಡನಿಗೆ ತೋರಿಸುತ್ತೇನೆ ಎಂದು ಬೆದರಿಕೆವೊಡ್ಡುತ್ತಿದ್ದ ಎಂದು ತಿಳಿಸಿದ್ದರು. ವಿಡಿಯೋದಲ್ಲಿ ಅಲ್ತಾಫ್ನೊಂದಿಗೆ ಇನ್ನೂಸ್ ಹಾಗೂ ದಸ್ತಗಿರಸಾಬ್ ಮುಳವಾಡ ಎಂಬುವವರ ಹೆಸರನ್ನು ಸುಹಾನ ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಏನಿದು ಘಟನೆ? ಉಪ್ಪಲದಿನ್ನಿ ಗ್ರಾಮದ ಅಲ್ತಾಫ್ ಸಿಲೆಮಾನ್ಗೆ 1 ವರ್ಷದ ಹಿಂದೆ ಸುಹಾನರ ಪರಿಚಯವಾಗಿತ್ತು. ಇಬ್ಬರ ನಡುವೆ ಪ್ರೀತಿಯು ಚಿಗುರೊಡೆದಿತ್ತು ಎನ್ನಲಾಗಿದೆ. ಈ ವಿಷಯ ಸುಹಾನ ಪೋಷಕರಿಗೆ ಗೊತ್ತಾಗಿ ಹಿರಿಯರ ಸಮ್ಮುಖದಲ್ಲಿ ಅಲ್ತಾಫ್ಗೆ ತಾಕೀತು ಸಹ ಮಾಡಿದ್ದರು. ಬಳಿಕ ಸುಹಾನ ಅವರನ್ನು ಹೊಕ್ಕುಂಡಿ ಗ್ರಾಮದ ಷರೀಫ್ ಸೋನಾರ್ ಎಂಬುವವರ ಜೊತೆಗೆ ಇತ್ತೀಚೆಗೆ ಮದುವೆ ಮಾಡಿಕೊಟ್ಟಿದ್ದರು. ಮದುವೆ ನಂತರ ಮಾಜಿ ಪ್ರಿಯಕರ ಅಲ್ತಾಫ್ ಸುಹಾನರಿಗೆ ನಿನ್ನ ಗಂಡನನ್ನು ಬಿಟ್ಟು ಬಾ. ಇಲ್ಲದಿದ್ದರೆ ನನ್ನೊಂದಿಗಿರುವ ಫೋಟೋವನ್ನು ನಿನ್ನ ಗಂಡನಿಗೆ ತೋರಿಸುತ್ತೇನೆ ಎಂದು ಬ್ಲಾಕ್ ಮೇಲ್ ಮಾಡುತ್ತಿದ್ದನಂತೆ.
ಇದನ್ನೂ ಓದಿ:ಸೈನಿ ಸಮಾಜ ಮೀಸಲಾತಿ ಹೋರಾಟ: ಪ್ರತಿಭಟನಾನಿರತ ಯುವಕ ಆತ್ಮಹತ್ಯೆ