ವಿಜಯಪುರ: ಭೀಮಾನದಿಯಲ್ಲಿ ಬೈಕ್ ಸಮೇತ ಕೊಚ್ಚಿ ಹೋಗಿದ್ದ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದಾನೆ. ಮಹಾರಾಷ್ಟ್ರದ ಲೌವಲಗಿ ಗ್ರಾಮದ ಭೀಮಾ ನದಿಯಲ್ಲಿ ತೇಲಾಡುತ್ತಿದ್ದ ಈತನ ಶವವನ್ನು ರೈತನೊಬ್ಬ ಗುರುತಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಭೀಮಾ ನದಿಯಲ್ಲಿ ಬೈಕ್ ಸಮೇತ ಕೊಚ್ಚಿ ಹೋಗಿದ್ದ ವ್ಯಕ್ತಿ ಶವವಾಗಿ ಪತ್ತೆ
ಶಂಕರ ಕಲ್ಲಪ್ಪ ಕೋಲೆ(65) ಶನಿವಾರ ಸಂಜೆ ನಂದೂರ ಗ್ರಾಮದ ಸಂಬಂಧಿಕರ ಮನೆಯಿಂದ ವಾಪಸ್ ಕಂದಲಗಾಂವಗೆ ಬೈಕ್ನಲ್ಲಿ ಬರುವಾಗ ಭಂಡರಕವಟೆಯ ಸೇತುವೆ ಮೇಲಿಂದ ಆಯ ತಪ್ಪಿ ಭೀಮಾ ನದಿಯಲ್ಲಿ ಬಿದ್ದು ಕೊಚ್ಚಿ ಹೋಗಿದ್ದು, ಸದ್ಯ ಶವ ಪತ್ತೆಯಾಗಿದೆ.
ಭೀಮಾನದಿಯಲ್ಲಿ ಬೈಕ್ ಸಮೇತ ಕೊಚ್ಚಿ ಹೋಗಿದ್ದ ವ್ಯಕ್ತಿ ಶವವಾಗಿ ಪತ್ತೆ
ಮಹಾರಾಷ್ಟ್ರದ ಕಂದಲಗಾಂವ ನಿವಾಸಿ ಶಂಕರ ಕಲ್ಲಪ್ಪ ಕೋಲೆ(65) ಶನಿವಾರ ಸಂಜೆ ನಂದೂರ ಗ್ರಾಮದ ಸಂಬಂಧಿಕರ ಮನೆಯಿಂದ ವಾಪಸ್ ಕಂದಲಗಾಂವಗೆ ಬೈಕ್ನಲ್ಲಿ ಬರುವಾಗ ಭಂಡರಕವಟೆಯ ಸೇತುವೆ ಮೇಲಿಂದ ಆಯ ತಪ್ಪಿ ಭೀಮಾ ನದಿಯಲ್ಲಿ ಬಿದ್ದು ಕೊಚ್ಚಿ ಹೋಗಿದ್ದ. ಅವರ ಪತ್ತೆಗಾಗಿ ಸ್ಥಳೀಯ ಮೀನುಗಾರರು ಹಾಗೂ ಈಜುಗಾರರು ಎರಡು ದಿನಗಳಿಂದ ಶೋಧ ಕಾರ್ಯ ನಡೆಸಿದ್ದರು. ಸೋಮವಾರ ಸಂಜೆ ನಾದೇಪೂರ ಬಾಂದಾರ ಮುಂಭಾಗ ಲೌವಲಗಿ ಬಳಿಯ ಭೀಮಾ ನದಿಯ ರೈತರೊಬ್ಬರ ಪಂಪ್ ಸೆಟ್ ಬಳಿ ಶವ ಪತ್ತೆಯಾಗಿದೆ.