ವಿಜಯಪುರ : ಫೇಸ್‌ಬುಕ್ ಗೆಳತಿಯನ್ನು ನಂಬಿ ವ್ಯಕ್ತಿಯೊಬ್ಬ ಲಕ್ಷಾಂತರ ರೂಪಾಯಿ ಕಳೆದುಕೊಂಡಿರುವ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ಬಗಲೂರ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಬಗಲೂರ ಗ್ರಾಮದ ನಿವಾಸಿ ಪರಮೇಶ ಹಿಪ್ಪರಗಿ ಮೋಸ ಹೋಗಿದ್ದು, ಹಾಸನ ಮೂಲದ ಮಹಿಳೆ ಹಣ ಪಡೆದು ವಂಚಿಸಿರುವುದಾಗಿ ತಿಳಿದುಬಂದಿದೆ.
ಫೇಸ್‌ಬುಕ್ ಗೆಳತಿಯ ಮೋಹಕ್ಕೆ ಬಿದ್ದು 41 ಲಕ್ಷ ಕಳೆದುಕೊಂಡ ಸಿಂದಗಿಯ ವ್ಯಕ್ತಿ - ಈಟಿವಿ ಭಾರತ ಕನ್ನಡ
ಫೇಸ್‌ಬುಕ್ ಗೆಳತಿಯನ್ನು ನಂಬಿ ಲಕ್ಷಾಂತರ ರೂಪಾಯಿ ನೀಡಿ ವ್ಯಕ್ತಿಯೊಬ್ಬ ಮೋಸ ಹೋಗಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.
![ಫೇಸ್‌ಬುಕ್ ಗೆಳತಿಯ ಮೋಹಕ್ಕೆ ಬಿದ್ದು 41 ಲಕ್ಷ ಕಳೆದುಕೊಂಡ ಸಿಂದಗಿಯ ವ್ಯಕ್ತಿ a-man-cheated-by-facebook-friend](https://etvbharatimages.akamaized.net/etvbharat/prod-images/768-512-16957499-thumbnail-3x2-yyy.jpg)
ಫೇಸ್‌ಬುಕ್ ಗೆಳತಿಯ ಮೋಹಕ್ಕೆ ಬಿದ್ದು 41 ಲಕ್ಷ ಕಳೆದುಕೊಂಡ ಸಿಂದಗಿಯ ವ್ಯಕ್ತಿ
ಇನ್ನು ಈ ಮಹಿಳೆಯು ಫೇಸ್‌ಬುಕ್ ಮೂಲಕ ಪರಮೇಶಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಸ್ನೇಹ ಬೆಳೆಸಿಕೊಂಡಿದ್ದಾರೆ. ಬಳಿಕ ಪರಮೇಶ್ನಲ್ಲಿ 700 ರೂ ನೀಡುವಂತೆ ಕೇಳಿದ್ದಾಳೆ. ಹೀಗೆ ಈ ಮಹಿಳೆ ಪರಮೇಶನಲ್ಲಿ ನಿತ್ಯ ಹಣ ಕೇಳಿ, ಬರೋಬ್ಬರಿ 41.26 ಲಕ್ಷ ರೂ ವಂಚನೆ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ. ಹೀಗೆ ಮಹಿಳೆಯನ್ನು ನಂಬಿ ಮೋಸ ಹೋದ ಪರಮೇಶ ವಿಜಯಪುರ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.
ಇದನ್ನೂ ಓದಿ :ಕೋಟ್ಯಂತರ ರೂ. ಅಕ್ರಮ ಆರೋಪ.. ಇಜಾಂಜ್ ಕಂಪನಿ ಪಾಲುದಾರನನ್ನು ಬಂಧಿಸಿದ ಇಡಿ