ವಿಜಯಪುರ :ಕೃಷಿ ವಲಯದಲ್ಲಿ ಕೆಲಸಗಾರರು ಸಿಗದೇ ರೈತರು ಜಮೀನು ಕೆಲಸಗಳಿಗೆ ಯಂತ್ರಗಳ ಮೊರೆ ಹೋಗಿದ್ದಾರೆ. ಆದರೆ, ಸಣ್ಣ ಮತ್ತು ಮಧ್ಯಮ ರೈತರಿಗೆ ಈ ಯಂತ್ರಗಳ ಬಳಕೆಯೂ ಸಹ ಹೆಚ್ಚು ಹೊರೆಯಾಗುತ್ತಿದೆ. ಈ ಹಿನ್ನೆಲೆ ರೈತರಿಗೆ ಕೈಗೆಟುಕುವ ಯಂತ್ರವೊಂದನ್ನ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ತಯಾರಿಸಿದ್ದಾರೆ. ಇನ್ಸ್ಪೈರ್ ಅವಾರ್ಡ್ ಸಹ ಗೆದ್ದುಕೊಂಡಿದ್ದಾರೆ.
ಜಿಲ್ಲೆಯ ಇಂಡಿ ತಾಲೂಕಿನ ಸರ್ಕಾರಿ ಶಾಲೆಯ ಇಬ್ಬರು ವಿದ್ಯಾರ್ಥಿಗಳು ‘ಭೀಮ ಸಲಗ’ ಎಂಬ ಯಂತ್ರ ತಯಾರಿಸಿದ್ದಾರೆ. ಈ ಯಂತ್ರಕ್ಕೆ ಇನ್ಸ್ಪೈರ್ ಅವಾರ್ಡ್ ಸಹ ಬಂದಿದೆ. ಇಲ್ಲಿನ ನಾದ ಕೆ ಡಿ ಗ್ರಾಮದ ಸರ್ಕಾರಿ ಮಾಧ್ಯಮಿಕ ಶಾಲೆಯ ದೇವೀಂದ್ರ ಬಿರಾದಾರ್ ಹಾಗೂ ಕಾರ್ತಿಕ್ ಈ ಸಾಧನೆ ಮಾಡಿದ್ದಾರೆ.
ಹಳೆ ವಸ್ತು ಬಳಸಿ ಯಂತ್ರ ತಯಾರಿ
ಶಾಲೆಯಲ್ಲಿನ ನಿರುಪಯುಕ್ತ ವಸ್ತುಗಳು, ಹಳೆಯ ಫ್ಯಾನ್ ಭಾಗ, ಹಳೆಯ ಸೈಕಲ್ ವ್ಹೀಲ್ಗಳು ಸೇರಿ ಇತರ ವಸ್ತು ಬಳಸಿ ಕಟಾವು ಯಂತ್ರ ತಯಾರು ಮಾಡಿದ್ದಾರೆ. ಸುಮಾರು 25 ರಿಂದ 30 ಸಾವಿರ ರೂಪಾಯಿ ಖರ್ಚು ಮಾಡಿ ಯಂತ್ರವನ್ನು ತಯಾರಿಸಿ 2019-20ನೇ ಸಾಲಿನ ಇನ್ಸ್ಪೈರ್ ಅವಾರ್ಡ್ ವರ್ಚುವಲ್ ಸ್ಪರ್ಧೆಯಲ್ಲಿ ಭಾಗವಹಿಸಲಾಗಿತ್ತು.