ಮುದ್ದೇಬಿಹಾಳ: ತಾಲೂಕಿನಲ್ಲಿ ಕಾರಹುಣ್ಣಿಮೆ ನಿಮಿತ್ತ ಯುವಕರು, ಜಟ್ಟಿಗಳು ಭಾರವಾದ ಕಲ್ಲು ಗುಂಡುಗಳನ್ನು ಎತ್ತುವ ವಿಶೇಷ ಸಾಹಸ ಪ್ರದರ್ಶನ ಮಾಡಿದ್ದಾರೆ.
ಮುದ್ದೇಬಿಹಾಳ ತಾಲೂಕಿನಾದ್ಯಂತ ಸಂಭ್ರಮದ ಕಾರ ಹುಣ್ಣಿಮೆ ಆಚರಣೆ - ಸಂಭ್ರಮದ ಕಾರ ಹುಣ್ಣಿಮೆ ಆಚರಣೆ
ಈ ವರ್ಷ ಕಾರ ಹುಣ್ಣಿಮೆಯನ್ನು ಎಲ್ಲೆಡೆ ಕೊರೊನಾ ಮರೆತು ಸಂಭ್ರಮದಿಂದ ಅನ್ನದಾತರು ಆಚರಿಸಿದ್ದಾರೆ. ಈ ಹಬ್ಬದ ನಿಮಿತ್ಯ ಎತ್ತುಗಳನ್ನು ಕರಿ ಹರಿದ ಬಳಿಕ ರೈತರು ಭಾರ ಎತ್ತುವ ಪ್ರದರ್ಶನಗಳನ್ನು ಏರ್ಪಡಿಸಿದ್ದರು.
ಕಾರ ಹುಣ್ಣಿಮೆ ಆಚರಣೆ
ಕಾರಹುಣ್ಣಿಮೆ ಭಾಗವಾಗಿ ಎತ್ತುಗಳನ್ನು ಕರಿ ಹರಿದ ಬಳಿಕ ರೈತರು ಭಾರ ಎತ್ತುವ ಪ್ರದರ್ಶನಗಳನ್ನು ಏರ್ಪಡಿಸುವುದು ವಾಡಿಕೆ. ಹಗರಗುಂಡ ತಾಂಡಾದ ಶಿವಾನಂದ ನಾಯಕ 120 ಕೆ.ಜಿ ಗುಂಡನ್ನು ಸಲೀಸಾಗಿ ಚೆಂಡಿನಂತೆ ಎತ್ತಿಳಿಸಿದ್ದು ಗ್ರಾಮಸ್ಥರ ಮೆಚ್ಚುಗೆ ಗಳಿಸಿತು.
ತಾಲೂಕಿನ ಬಿದರಕುಂದಿ ಗ್ರಾಮದ ಯುವಕ ಪರಶುರಾಮ ವಡ್ಡರ 90 ಕೆ.ಜಿ ಗುಂಡು ಹೊತ್ತುಕೊಂಡು 400 ಅಡಿ ಸಂಚರಿಸಿ ಸಾಹಸ ಮೆರೆದಿದ್ದಾನೆ.