ವಿಜಯಪುರ:ಸಾಲಬಾಧೆ ಹಿನ್ನೆಲೆಯಲ್ಲಿಪತ್ನಿ ಕೊಲೆಗೈದು ಪತಿ ಆತ್ಮಹತ್ಯೆಗೆ ಶರಣಾದ ಘಟನೆ ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದಲ್ಲಿ ನಡೆದಿದೆ.
ಸುರೇಶ ಸಂಗಪ್ಪ ಸಜ್ಜನ (42) ಪತ್ನಿ ಕೊಲೆಗೈದು ಆತ್ಮಹತ್ಯೆಗೆ ಶರಣಾದ ವ್ಯಕ್ತಿ.ರತ್ನಾ ಸುರೇಶ ಸಜ್ಜನ (33) ಪತಿಯಿಂದ ಕೊಲೆಗೀಡಾದ ಮಹಿಳೆ.

ಸಾಲಗಾರರ ಕಿರಿಕಿರಿಯಿಂದ ಪತಿ, ಪತ್ನಿ ನಡುವೆ ನಡೆದ ವಾಗ್ವಾದ ಈ ಘಟನೆಗೆ ಕಾರಣ ಎನ್ನಲಾಗುತ್ತಿದೆ.
ಸಾಲಗಾರರ ಕಿರಿಕಿರಿಗೆ ಬೇಸತ್ತ ಪತ್ನಿ ರತ್ನಾ ಸಾಲಗಾರರ ಕುರಿತು ಪತಿಗೆ ಪ್ರಶ್ನೆ ಮಾಡಿದ್ದಳು. ಇದರಿಂದ ಕೋಪಗೊಂಡ ಪತಿ ಸುರೇಶ ಕಬ್ಬಿಣದ ರಾಡ್ನಿಂದ ತಲೆಗೆ ಹೊಡೆದು ಪತ್ನಿ ರತ್ನಾಳ ಕೊಲೆ ಮಾಡಿದ್ದಾನೆ. ನಂತರ ಭಯದಲ್ಲಿ ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾನೆ.
ಸ್ಥಳಕ್ಕೆ ಮುದ್ದೇಬಿಹಾಳ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿ ಪ್ರಕರಣ ದಾಖಲಾಗಿದೆ.