ಕರ್ನಾಟಕ

karnataka

ETV Bharat / state

ಲಕ್ಷಾಂತರ ಮೌಲ್ಯದ ಬಟ್ಟೆ ಕದಿಯುತ್ತಿದ್ದ ಕಳ್ಳನನ್ನು ರೆಡ್​ ಹ್ಯಾಂಡ್​ ಆಗಿ ಹಿಡಿದ ಗೂರ್ಖಾ

ಬಟ್ಟೆ ಅಂಗಡಿಯ ಶಟ್ಟರ್​ ಬೀಗ ಮುರಿದು ಅಂಗಡಿಯಲ್ಲಿನ ಬಟ್ಟೆ ಕಳ್ಳತನಕ್ಕೆ ಮುಂದಾಗಿದ್ದ ಕಳ್ಳನೊಬ್ಬನನ್ನು ರಾತ್ರಿ ಕಾವಲುಗಾರನಾಗಿ ಕೆಲಸ ಮಾಡುತ್ತಿರುವ ಗೂರ್ಖಾ ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿರುವ ಘಟನೆ ಶುಕ್ರವಾರ ನಡೆದಿದೆ.

A goorkha caught a thief red hand while stealing cloths in Garment
ಲಕ್ಷಾಂತರ ಮೌಲ್ಯದ ಬಟ್ಟೆ ಕದಿಯುತ್ತಿದ್ದ ಕಳ್ಳನನ್ನು ರೆಡ್​ ಹ್ಯಾಂಡ್​ ಆಗಿ ಹಿಡಿದ ಗೂರ್ಖಾ

By

Published : Oct 9, 2020, 8:35 PM IST

ಮುದ್ದೇಬಿಹಾಳ:ಬಟ್ಟೆ ಅಂಗಡಿಯ ಶಟ್ಟರ್​ ಬೀಗ ಮುರಿದು ಅಂಗಡಿಯಲ್ಲಿನ ಬಟ್ಟೆ ಕಳ್ಳತನಕ್ಕೆ ಮುಂದಾಗಿದ್ದ ಕಳ್ಳನೊಬ್ಬನನ್ನು ರಾತ್ರಿ ಕಾವಲುಗಾರನಾಗಿ ಕೆಲಸ ಮಾಡುತ್ತಿರುವ ಗೂರ್ಖಾ ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿರುವ ಘಟನೆ ಶುಕ್ರವಾರ ನಡೆದಿದೆ.

ಲಕ್ಷಾಂತರ ಮೌಲ್ಯದ ಬಟ್ಟೆ ಕದಿಯುತ್ತಿದ್ದ ಕಳ್ಳನನ್ನು ರೆಡ್​ ಹ್ಯಾಂಡ್​ ಆಗಿ ಹಿಡಿದ ಗೂರ್ಖಾ

ಪಟ್ಟಣದ ಬಸವೇಶ್ವರ ವೃತ್ತದ ಸಮೀಪದಲ್ಲಿರುವ ದಾದಾ ಗಣಪತಿ ಶೋ ರೂಂನಲ್ಲಿ ಈ ಘಟನೆ ನಡೆದಿದೆ. ಪಟ್ಟಣದಲ್ಲಿ ಹಲವಾರು ವರ್ಷಗಳಿಂದ ಕಾವಲುಗಾರನಾಗಿ ಕೆಲಸ ಮಾಡುತ್ತ ಅಂಗಡಿ ಮಾಲೀಕರು ಕೊಟ್ಟ ಅಷ್ಟು ಇಷ್ಟು ಹಣ ಪಡೆಯುತ್ತಿರುವ ನೇಪಾಳ ಮೂಲದ ಗೂರ್ಖಾ ಶೇರ್ ಬಹಾದ್ದೂರ ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ನಿನ್ನೆ ತಡರಾತ್ರಿ ಗೂರ್ಖಾ ರಸ್ತೆಯಲ್ಲಿ ಕಾವಲು ಕಾಯುತ್ತಿದ್ದಾಗ ಅಂಗಡಿಯೊಂದರ ಶಟ್ಟರ್​ ಬೀಗ ಮುರಿದು ಅಂಗಡಿಯಲ್ಲಿದ್ದ ಬಟ್ಟೆಯನ್ನು ದೊಡ್ಡ ದೊಡ್ಡ ಚೀಲಗಳಲ್ಲಿ ತುಂಬಿಸಿಟ್ಟಿದ್ದ ಕಳ್ಳ ಅದನ್ನು ಸಾಗಿಸಲು ಹೊಂಚು ಹಾಕುತ್ತಿದ್ದದ್ದು ಕಣ್ಣಿಗೆ ಬಿದ್ದಿದೆ. ಕೂಡಲೇ ಗೂರ್ಖಾ ಆತನನ್ನು ಕೂಡಿ ಹಾಕಿ ಅಂಗಡಿ ಮಾಲೀಕನಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಕಳ್ಳನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಗೂರ್ಖಾ ಉಪಜೀವನಕ್ಕೂ ಪರದಾಟ:

ಕಳೆದ 26 ವರ್ಷಗಳಿಂದ ಪಟ್ಟಣದಲ್ಲಿ ಕಾವಲು ಕೆಲಸ ಮಾಡುತ್ತಿರುವ ಗೂರ್ಖಾ ಶೇರ್ ಬಹಾದ್ದೂರಿಗೆ ನಿತ್ಯದ ಉಪಜೀವನ ನಡೆಸಲು ಕಷ್ಟದ ಪರಿಸ್ಥಿತಿ ಇದೆ. ಪ್ರತಿ ತಿಂಗಳು ಬಜಾರ್​​ನಲ್ಲಿರುವ ಅಂಗಡಿಗಳ ಮಾಲೀಕರು ನೀಡುವ ಹಣವನ್ನು ವಿನಯತೆಯಿಂದಲೇ ಪಡೆಯುವ ಸ್ವಭಾವ ರೂಢಿಸಿಕೊಂಡಿರುವ ಇವರಿಗೆ ಯಾವುದೇ ನಿಗದಿತ ವೇತನ, ಮಾಸಾಶನ ಇಲ್ಲ. ಅಲ್ಲದೇ ಪೊಲೀಸ್​ ಇಲಾಖೆಯಿಂದಲೂ ಆತ್ಮ ರಕ್ಷಣೆಗೆ ಸಾಧನವೂ ಇಲ್ಲ. ಆದರೂ ಇವರು ಪ್ರಾಮಾಣಿಕತೆಯಿಂದ ಊರನ್ನು ಕಾಯುವ ಕೆಲಸ ಮಾಡುತ್ತಿದ್ದಾರೆ. ಇಂತಹವರ ನೆರವಿಗೆ ಪಟ್ಟಣದ ವ್ಯಾಪಾರಸ್ಥರು ನಿಲ್ಲಬೇಕು ಎಂದು ಕರ್ನಾಟಕ ಅರ್ಬನ್ ಬ್ಯಾಂಕ್ ಅಧ್ಯಕ್ಷ ಸತೀಶ ಓಸ್ವಾಲ್, ನಿರ್ದೇಶಕ ಶರಣು ಬೂದಿಹಾಳಮಠ ಅವರು ವಿನಂತಿಸಿಕೊಂಡಿದ್ದಾರೆ.

ABOUT THE AUTHOR

...view details