ಕರ್ನಾಟಕ

karnataka

ETV Bharat / state

ಹುಟ್ಟುಹಬ್ಬಕ್ಕೆಂದು ಕೂಡಿಟ್ಟ ಹಣದಿಂದಲೇ ಗಿಡಗಳಿಗೆ ನೀರುಣಿಸಿದ ಪರಸರ ಪ್ರೇಮಿ ಪುಟ್ಟಕ್ಕ.. - ಮುದ್ದೇಬಿಹಾಳ ಸುದ್ದಿ

ಪಟ್ಟಣದಲ್ಲಿ ಅರಣ್ಯ ಇಲಾಖೆಯವರು ನೆಟ್ಟಿರುವ ಸಾವಿರಾರು ಗಿಡಗಳಿಗೆ ನೀರಿನ ಅವಶ್ಯಕತೆ ಇದೆ. ಅರಣ್ಯ ಇಲಾಖೆಗೆ ನೀರಿನ ಅವಶ್ಯಕತೆ ಇದೆ ಎಂದು ತಿಳಿದು ಬಂದಿದೆ. ಅದಕ್ಕಾಗಿ ಪುರಸಭೆ ಮೂಲಕ ಕೆರೆಯ ನೀರನ್ನು ಗಿಡಗಳಿಗೆ ಹಾಕಲು ಸಂಬಂಧಿಸಿದವರ ಗಮನಕ್ಕೆ ತರುತ್ತೇವೆ..

muddebihala
ನೀರು ಖರೀದಿಸಿ ಗಿಡಗಳಿಗೆ ಪೂರೈಸಿದ ಮಾದರಿ ಬಾಲಕಿ

By

Published : Apr 2, 2021, 12:43 PM IST

ಮುದ್ದೇಬಿಹಾಳ :ಬೇಸಿಗೆಯಲ್ಲಿ ಜೀವಜಲಕ್ಕೆ ಪ್ರತಿ ಜೀವಿಯೂ ಪರದಾಡುವ ಸ್ಥಿತಿ. ಆದರೆ, ಇಲ್ಲೊಬ್ಬ ಬಾಲೆ ತನ್ನ ಜನ್ಮ‌ದಿನದ ಸಂಭ್ರಮಕ್ಕಾಗಿ ಕೂಡಿಟ್ಟ ಹಣದಲ್ಲಿ ಎರಡು ಟ್ಯಾಂಕರ್ ನೀರು ಖರೀದಿಸಿದ್ದಾರೆ. ಅದೇ ನೀರನ್ನ ಅರಣ್ಯ ಇಲಾಖೆ ನೆಟ್ಟ ಗಿಡಗಳಿಗೆ ಹಾಕಿದ್ದಾಳೆ. ವಿಶೇಷ ಪರಿಸರ ಪ್ರೀತಿಯ ಮೂಲಕ ತನ್ನ ಜನಮದಿನಕ್ಕೊಂದು ಅರ್ಥ ನೀಡಿದ್ದಾಳೆ.

ತಮ್ಮ ಜನ್ಮದಿನವನ್ನು ವಿನೂತನವಾಗಿ ಆಚರಿಸುವ ಮೂಲಕ ನಮಗೆ ಉಸಿರು ಕೊಡುವ ಗಿಡಗಳಿಗೆ ಜೀವಜಲ ಧಾರೆ ಎರೆದ ಈ ಬಾಲಕಿ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಮುದ್ದೇಬಿಹಾಳದ ಸಮಾಜ ಸೇವಕ ಸಿದ್ದನಗೌಡ ಪಾಟೀಲ ಅವರು ಪಟ್ಟಣದ ಮಾರುತಿ ನಗರದಲ್ಲಿ ಅರಣ್ಯ ಇಲಾಖೆಯವರು ನೆಟ್ಟ ಸುಮಾರು 50 ಗಿಡಗಳಿಗೆ, ತಮ್ಮ ಮಗಳ ಹುಟ್ಟುಹಬ್ಬಕ್ಕೆ ಕೂಡಿಟ್ಟ ದುಡ್ಡಲ್ಲಿ ನೀರು ಪೂರೈಸಿ ಅರ್ಥಪೂರ್ಣ ಬೆಳವಣಿಗೆಗೆ ಸಾಕ್ಷಿಯಾಗಿದ್ದಾರೆ.

ನೀರು ಖರೀದಿಸಿ ಗಿಡಗಳಿಗೆ ಪೂರೈಸಿದ ಮಾದರಿ ಬಾಲಕಿ

"ಮಗಳ ಹುಟ್ಟುಹಬ್ಬ ವಿಭಿನ್ನವಾಗಿಸುವ ಆಲೋಚನೆಯಿತ್ತು. ಅದಕ್ಕೆ ಪಟ್ಟಣದಲ್ಲಿ ಪರಿಸರದ ಕಾಳಜಿ ಮಾಡುತ್ತಿರುವ ಹಸಿರು ತೋರಣ ಗೆಳೆಯರ ಬಳಗದ ಸದಸ್ಯರು ಜೊತೆಯಾದರು. ಎರಡು ಟ್ಯಾಂಕರ್ ನೀರಿನ ಮೂಲಕ ಸುಮಾರು 50 ಗಿಡಗಳಿಗೆ ನೀರುಣಿಸಿದ ತೃಪ್ತಿ ಇದೆ. ಇಂತಹ ಮಾದರಿ ಕೆಲಸಕ್ಕೆ ಯುವಕರು ಮುಂದಾಗಬೇಕು" ಅಂತಾರೆ ಸಿದ್ದನಗೌಡ ಪಾಟೀಲ.

ಸಮಾಜ ಸೇವಕ ಅಶೋಕ್ ನಾಡಗೌಡ ಮಾತನಾಡಿ, ಪಟ್ಟಣದಲ್ಲಿ ಅರಣ್ಯ ಇಲಾಖೆಯವರು ನೆಟ್ಟಿರುವ ಸಾವಿರಾರು ಗಿಡಗಳಿಗೆ ನೀರಿನ ಅವಶ್ಯಕತೆ ಇದೆ. ಅರಣ್ಯ ಇಲಾಖೆಗೆ ನೀರಿನ ಅವಶ್ಯಕತೆ ಇದೆ ಎಂದು ತಿಳಿದು ಬಂದಿದೆ. ಅದಕ್ಕಾಗಿ ಪುರಸಭೆ ಮೂಲಕ ಕೆರೆಯ ನೀರನ್ನು ಗಿಡಗಳಿಗೆ ಹಾಕಲು ಸಂಬಂಧಿಸಿದವರ ಗಮನಕ್ಕೆ ತರುತ್ತೇವೆ ಎಂದರು.

ಹಸಿರು ತೋರಣ ಗೆಳೆಯರ ಬಳಗದ ಸಂಚಾಲಕ ಮಹಾಬಲೇಶ್ವರ ಗಡೇದ್ ಮಾತನಾಡಿ, ಮಕ್ಕಳ ಹುಟ್ಟುಹಬ್ಬ ಅಥವಾ ವಿವಾಹ ವಾರ್ಷಿಕೋತ್ಸವ ಆಚರಣೆ ಅರ್ಥಪೂರ್ಣವಾಗಿಸಬಹುದು ಎಂಬುದನ್ನು ಸಿದ್ದನಗೌಡ ಪಾಟೀಲ ಮಾಡಿ ತೋರಿಸಿದ್ದಾರೆ. ಎಷ್ಟು ಟ್ಯಾಂಕರ್ ನೀರು ಹಾಗೂ ಎಷ್ಟು ಗಿಡಗಳಿಗೆ ನೀರುಣಿಸಲಾಯಿತು ಎಂಬುದು ಮುಖ್ಯವಲ್ಲ.

ಪಟ್ಟಣದವರು ಎಲ್ಲರೂ ಪರಿಸರ ಉಳಿಸುವ, ಬೆಳೆಸುವ ಅಭಿಯಾನ ಕೈಗೊಳ್ಳಬೇಕು. ಮನೆಯ ಮುಂದೆ ಅಥವಾ ಬಡಾವಣೆಯಲ್ಲಿರುವ ಗಿಡಗಳಿಗೆ ಸಾಧ್ಯವಾದಷ್ಟು ನೀರುಣಿಸುವ ಕೆಲಸ ಮಾಡಬೇಕು ಎಂದರು.

ABOUT THE AUTHOR

...view details