ಕರ್ನಾಟಕ

karnataka

ETV Bharat / state

ಸಾಲಬಾಧೆ ತಾಳಲಾರದೇ ಆತ್ಮಹತ್ಯೆಗೆ ಶರಣಾದ ರೈತ - ಹುಣಸೆ ಮರ

ಸಾಲಬಾಧೆ ತಾಳಲಾರದೇ ರೈತ ಆತ್ಮಹತ್ಯೆಗೆ ಶರಣಾದ ಘಟನೆ ಮುದ್ದೇಬಿಹಾಳ ತಾಲೂಕಿನ ಕೊಪ್ಪ ಗ್ರಾಮದಲ್ಲಿ ನಡೆದಿದೆ.

ಆತ್ಮಹತ್ಯೆಗೆ ಶರಣಾದ ರೈತ

By

Published : Aug 15, 2019, 9:34 PM IST

ವಿಜಯಪುರ: ಸಾಲಬಾಧೆ ತಾಳಲಾರದೇ ರೈತ ಆತ್ಮಹತ್ಯೆಗೆ ಶರಣಾದ ಘಟನೆ ಮುದ್ದೇಬಿಹಾಳ ತಾಲೂಕಿನ ಕೊಪ್ಪ ಗ್ರಾಮದಲ್ಲಿ ನಡೆದಿದೆ.

ಕಾಂತಪ್ಪ ಶರಣಪ್ಪ ಕನ್ನೂರ (36) ನೇಣಿಗೆ ಶರಣಾದ ರೈತ. ಕೊಪ್ಪ ಗ್ರಾಮದ ಶೇಖರಯ್ಯ ಹಿರೇಮಠ ಎಂಬುವವರ ಹೊಲದಲ್ಲಿದ್ದ ಹುಣಸೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ರೈತನ ಹೆಸರಿನಲ್ಲಿ ಜಂಟಿಯಾಗಿ ಐದು ಎಕರೆ ಜಮೀನಿದ್ದು, ಕಬ್ಬಿನ ಬೆಳೆ ಬೆಳೆಯಲಾಗಿದೆ. ನಿಡಗುಂದಿ ತಾಲೂಕಿನ ಇಟಗಿ ಗ್ರಾಮದ ಕೆ.ವಿ.ಜಿ ಬ್ಯಾಂಕ್​​​ನಲ್ಲಿ 1.50 ಲಕ್ಷ ಹಾಗೂ ಗ್ರಾಮದಲ್ಲಿ ಕೈಗಡವಾಗಿ 2 ಲಕ್ಷ ರೂ. ಸಾಲ ಮಾಡಿಕೊಂಡಿದ್ದ. ಸಾಲದ ಬಾಧೆಯಿಂದ ನೇಣಿಗೆ ಶರಣಾಗಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ.

ಈ ಕುರಿತಂತೆ ಸ್ಥಳಕ್ಕೆ ಮುದ್ದೇಬಿಹಾಳ ತಹಶೀಲ್ದಾರ್ ವಿಜಯಕುಮಾರ ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details