ವಿಜಯಪುರ: ಪ್ರತಿ ವರ್ಷ ತಡವಾಗಿ ಬರುತ್ತಿದ್ದ ಮುಂಗಾರು ಮಳೆ ಜೂನ್ ಮೊದಲ ವಾರದಲ್ಲಿಯೇ ರಾಜ್ಯಕ್ಕೆ ಕಾಲಿಟ್ಟಿದ್ದು, ಅನ್ನದಾತನಲ್ಲಿ ಹರ್ಷ ಮೂಡಿಸಿದೆ. ಬಿತ್ತನೆ ಕಾರ್ಯಕ್ಕೆ ಮುನ್ನ ಹೊಲದ ಕಳೆ ತಗೆಯಲು ಮುಂದಾಗಿರುವ ಅನ್ನದಾತರು, ಈ ಬಾರಿ ಉತ್ತಮ ಬೆಳೆ ನಿರೀಕ್ಷೆಯಲ್ಲಿದ್ದಾರೆ.
ವಿಜಯಪುರ: ಮುಂಗಾರು ಬಿತ್ತನೆಗೆ ಸಿದ್ಧತೆ... ಭರ್ಜರಿ ಬೆಳೆ ನಿರೀಕ್ಷೆಯಲ್ಲಿ ಅನ್ನದಾತ - ವಿಜಯಪುರ ಜಿಲ್ಲಾಡಳಿತ
ವಿಜಯಪರ ಜಿಲ್ಲೆಯಲ್ಲಿ ಮುಂಗಾರು ಆರಂಭಗೊಂಡಿದ್ದು, ರೈತರಿಗೆ ವಿತರಿಸಲು ಬಿತ್ತನೆ ಬೀಜ ದಾಸ್ತಾನು ಮಾಡಿಕೊಳ್ಳಲಾಗಿದೆ. ಪ್ರತಿ ವರ್ಷ ಬಿತ್ತನೆ ಬೀಜಕ್ಕಾಗಿ ರೈತರು ಪ್ರತಿಭಟನೆ ಮಾಡುವ ಪರಿಸ್ಥಿತಿ ಬಂದೊದಗಿದೆ. ಕಳಪೆ ಬೀಜ ಮಾರಾಟ ಜಿಲ್ಲೆಯಲ್ಲಿ ಹೆಚ್ಚಾಗಿದ್ದು, ಈ ಬಾರಿ ರೈತರಿಗೆ ಮೋಸವಾಗದಂತೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.
ಭರ್ಜರಿ ಬೆಳೆ ನೀರಿಕ್ಷೆಯಲ್ಲಿ ಅನ್ನದಾತ
ಕಳೆದ ನಾಲ್ಕೈದು ವರ್ಷಗಳಿಂದ ಭೀಕರ ಬರ, ಪ್ರವಾಹದಂತಹ ಪ್ರಕೃತಿ ವಿಕೋಪದಿಂದ ರೈತ ಉತ್ತಮ ಇಳುವರಿ ಇಲ್ಲದೇ ಮಾಡಿದ ಸಾಲ ತೀರಿಸಲಾಗದೆ ಆತ್ಮಹತ್ಯೆ ದಾರಿ ತುಳಿದಿದ್ದ. ಆದರೆ ಈ ಬಾರಿ ಎಲ್ಲಾ ಕೆರೆ, ನಾಲೆಗಳು ತುಂಬಿ ಹರಿಯುತ್ತಿವೆ. ಜಿಲ್ಲೆಯ ಜೀವನಾಡಿ ಆಲಮಟ್ಟಿ ಜಲಾಶಯ ಭರ್ತಿಯಾಗಿದ್ದು, ನೀರಿನ ಚಿಂತೆ ರೈತರಲ್ಲಿ ಇಲ್ಲ. ಇನ್ನೇನಿದ್ದರೂ ವರುಣ ದೇವ ಕೃಪೆ ತೋರಿದರೆ ಜೋಳ, ಗೋಧಿ, ಹೆಸರು ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಬೆಳೆಯುವ ಬೆಳೆ ಬೆಳೆಯಲು ರೈತ ಸಜ್ಜಾಗಿದ್ದಾನೆ.