ವಿಜಯಪುರ:ಸಾರಿಗೆ ನೌಕರರು ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದೆ. ಆದರೆ, ಕೆಲ ನಗರ ಸಾರಿಗೆ ಬಸ್ಗಳು ಸಂಚರಿಸುತ್ತಿವೆ. ಇದನ್ನು ಪಾನಮತ್ತ ಕಂಡಕ್ಟರ್ವೋರ್ವ ಖಂಡಿಸಿ ಬಸ್ ಚಾಲಕನಿಗೆ ಅಡ್ಡಗಟ್ಟಲು ಯತ್ನಿಸಿದ ಘಟನೆ ನಡೆದಿದೆ.
ನಗರ ಸಾರಿಗೆ ಬಸ್ ಅನ್ನು ಅಡ್ಡಗಟ್ಟಿ ಜಗಳಕ್ಕಿಳಿದ ಪಾನಮತ್ತ ಕಂಡಕ್ಟರ್ ಕೆಎಸ್ಆರ್ಟಿಸಿ ಸಿಬ್ಬಂದಿಯನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಿ ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದೆ. ಆ ಪ್ರಯುಕ್ತ ಇಂದು ಕೂಡ ಕೆಎಸ್ಆರ್ಟಿಸಿ ಬಸ್ ಸಂಚಾರ ಸ್ಥಗಿತವಾಗಿದೆ. ಆದರೆ, ನಗರ ಸಾರಿಗೆ, ಖಾಸಗಿ ಬಸ್ ಗಳು ಮಾತ್ರ ಸಂಚರಿಸುತ್ತಿವೆ.
ವಿಜಯಪುರ ನಗರದ ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿ ಮದ್ಯ ಸೇವಿಸಿ ಬಂದಿದ್ದ ಬಸ್ ಕಂಡಕ್ಟರ್ ಭೀಮಪ್ಪ ಕರೆಪ್ಪ ಎಂಬಾತ ಬಸ್ ತಡೆಯಲು ಯತ್ನಿಸಿದ್ದಾನೆ. ಆತ 'ನಾನು ಡಿಪೋ ನಂ.1 ರಲ್ಲಿದ್ದೇನೆ. ನನ್ನ ಬ್ಯಾಚ್ ನಂಬರ್ 1024 ಆಗಿದೆ. ನಾನು ಕುಡಿದು ಬಂದಿದ್ದೇನೆ. ಇದನ್ನು ನಾನು ಸಚಿವ ಸವದಿಗೂ ಕೂಗಿ ಹೇಳ್ತೇನೆ. ರಮೇಶ ಜಾರಕಿಹೊಳಿಗೂ ಹೇಳ್ತೇನೆ. ನಾನು ಯಾರಿಗೂ ಹೆದರಲ್ಲ. ಖಾಕಿ ಬಟ್ಟೆ ತೆಗೆದ ನಂತರ ಕರ್ತವ್ಯವಲ್ಲದ ವೇಳೆ ಕುಡಿಯುತ್ತೇನೆ ಏನಿವಾಗ' ಎಂದು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಬಸ್ ಚಲಾಯಿಸಲು ಮುಂದಾದ ಚಾಲಕನ ಜೊತೆ ಜಗಳವಾಡಲು ಮುಂದಾದ ನಿರ್ವಾಹಕನನ್ನು ಪೊಲೀಸರು ಮನವೊಲಿಸಿ ಅಲ್ಲಿಂದ ಬೇರೆಡೆಗೆ ಕರೆದೊಯ್ದರು.