ಮುದ್ದೇಬಿಹಾಳ(ವಿಜಯಪುರ): ತಾಲೂಕಿನ ಕುಂಟೋಜಿ ಗ್ರಾಮದ ಜೋಡಿಯೊಂದು ಕರ್ಫ್ಯೂ ಮಧ್ಯೆ ಸರಳ ವಿವಾಹ ಮಾಡಿಕೊಂಡಿದೆ.
ಮುದ್ದೇಬಿಹಾಳ: ಭಾನುವಾರದ ಕರ್ಫ್ಯೂ ನಡುವೆ ಸರಳ ವಿವಾಹವಾದ ಜೋಡಿ - ವಿಜಯಪುರ ಕರ್ಫ್ಯೂ ಮಧ್ಯೆ ಸರಳ ವಿವಾಹ
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದ ಜೋಡಿಯೊಂದು ಕರ್ಫ್ಯೂ ಮಧ್ಯೆ ಸರಳ ವಿವಾಹವಾಗಿದ್ದು, ಅವರಿಗೆ ಕುಂಟೋಜಿ ಹಿರೇಮಠದ ಚೆನ್ನವೀರ ದೇವರು ಮತ್ತು ಇಟಗಿಯ ಗುರುಶಾಂತವೀರ ಶಿವಾಚಾರ್ಯರು ಸನ್ಮಾನಿಸಿ, ಆಶೀರ್ವದಿಸಿದರು.
ಮುದ್ದೇಬಿಹಾಳ: ಸಂಡೇ ಕರ್ಫ್ಯೂ ಮಧ್ಯೆ ಸರಳ ವಿವಾಹವಾದ ಜೋಡಿ
ಲಾಕ್‌ಡೌನ್ ಅವಧಿಯಲ್ಲಿ ಸರ್ಕಾರದ ನಿಯಮಗಳನ್ನ ಪಾಲಿಸಿ ಸರಳ ವಿವಾಹವಾದ ಜೋಡಿಗೆ ಕುಂಟೋಜಿ ಹಿರೇಮಠದ ಚೆನ್ನವೀರ ದೇವರು ಮತ್ತು ಇಟಗಿಯ ಗುರುಶಾಂತವೀರ ಶಿವಾಚಾರ್ಯರು ಸನ್ಮಾನಿಸಿ, ಆಶೀರ್ವದಿಸಿದರು.
ಈ ವೇಳೆ ಜಿ.ಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಕರ್ನಾಟಕ ಅರ್ಬನ್ ಬ್ಯಾಂಕ್ ಅಧ್ಯಕ್ಷ ಸತೀಶ ಓಸ್ವಾಲ, ತಾಲೂಕು ಬಿಜೆಪಿ ಕಾರ್ಯದರ್ಶಿ ಸಿದ್ದು ಹೆಬ್ಬಾಳ, ಪುರಸಭೆ ಮಾಜಿ ಸದಸ್ಯ ಬಸವರಾಜ ನಂದಿಕೇಶ್ವರಮಠ ಮತ್ತಿತರರು ಉಪಸ್ಥಿತರಿದ್ದರು.