ಕರ್ನಾಟಕ

karnataka

ETV Bharat / state

ಲಾಕ್​ ಡೌನ್​ ನಡುವೆ ಕಬ್ಬಿಣದ ಪೆಟ್ಟಿಗೆಯಲ್ಲಿ ಲಾಕ್​ ಆಗಿದ್ದ ಬಾಲಕ... ಹೊರಬಂದಿದ್ದು ಹೀಗೆ - police protected the child

ವಿಜಯಪುರದಲ್ಲಿ ಆಟವಾಡುತ್ತಾ ಹೋಗಿ ಕಬ್ಬಿಣದ ಪೆಟ್ಟಿಗೆಯಲ್ಲಿ ಸಿಲಿಕಿಕೊಂಡಿದ್ದ ಬಾಲಕನನ್ನು ಕರ್ಫ್ಯೂ ಕರ್ತವ್ಯದಲ್ಲಿದ್ದ ಪೊಲೀಸರು ರಕ್ಷಣೆ ಮಾಡಿದ್ದಾರೆ.

vijayapura
ಮಗುವನ್ನು ರಕ್ಷಣೆ ಮಾಡಿದ ಪೇದೆ

By

Published : Mar 25, 2020, 8:15 PM IST

ವಿಜಯಪುರ: ನಗರದಲ್ಲಿ ಆಟವಾಡುತ್ತಾ ಕಬ್ಬಿಣದ ಪೆಟ್ಟಿಗೆಯಲ್ಲಿ ಸಿಲಿಕಿಕೊಂಡಿದ್ದ ಬಾಲಕನನ್ನು ಕರ್ಫ್ಯೂ ಕರ್ತವ್ಯದಲ್ಲಿದ್ದ ಪೊಲೀಸರು ರಕ್ಷಿಸಿದ್ದಾರೆ.

ಕಬ್ಬಿಣದ ಪೆಟ್ಟಿಗೆಯಲ್ಲಿ ಸಿಲುಕಿಕೊಂಡಿದ್ದ ಬಾಲಕನನ್ನು ರಕ್ಷಣೆ ಮಾಡಿದ ಪೇದೆ

ನಗರದ ಬಸ್ ನಿಲ್ದಾಣದ ಮುಂಭಾಗದ ಕಬ್ಬಿನ ಹಾಲು ಮಾರಾಟ ಮಾಡುವ ಅಂಗಡಿಯಲ್ಲಿದ್ದ ಪೆಟ್ಟಿಗೆಯಲ್ಲಿ ಬಾಲಕ ಆಟವಾಡುತ್ತಾ ಹೋಗಿ ಸಿಲುಕಿ ಹಾಕಿಕೊಂಡು ಹೊರ ಬರಲಾಗದೆ ಉಸಿರಾಟದ ತೊಂದರೆಯಿಂದ ಕಿರುಚಿಕೊಂಡಾಗ ಕರ್ತವ್ಯನಿರತ ಪೊಲೀಸ್ ಪೇದೆಯು ಪೆಟ್ಟಿಗೆಯ ಬೀಗ ಮುರಿದು ಬಾಲಕನನ್ನು ಹೊರ ತೆಗೆದಿದ್ದಾರೆ.

ಪೆಟ್ಟಿಯಲ್ಲಿ ಸಿಲುಕಿದ್ದ ಬಾಲಕನನ್ನು ಹೊರ ತೆಗೆದು ಕುಡಿಯಲು ನೀರು ಕೊಟ್ಟು ಪೊಲೀಸರು ಮನೆಗೆ ಕಳಿಸಿದ್ದಾರೆ.

ABOUT THE AUTHOR

...view details