ವಿಜಯಪುರ: ಜಿಲ್ಲೆಯ ತಾಳಿಕೋಟೆ ಪಟ್ಟಣದ ಮಿಣಜಗಿ ರಸ್ತೆಯಲ್ಲಿರುವ ಹೊಯ್ಸಳ ಡಾಬಾದ ಹಿಂದುಗಡೆಯ ಕಲ್ಲಿನ ಕ್ವಾರಿಯ ನೀರಿನಲ್ಲಿ ಸೈಕಲ್ ತೊಳೆಯಲು ಹೋಗಿ ಕಾಲು ಜಾರಿ ಬಿದ್ದು ಬಾಲಕನೊಬ್ಬ ಮೃತಪಟ್ಟಿರುವ ಘಟನೆ ತಾಳಿಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕಲ್ಲು ಕ್ವಾರಿಯಲ್ಲಿ ಸೈಕಲ್ ತೊಳೆಯಲು ಹೋಗಿ ಬಾಲಕ ಸಾವು - ಕಾಲು ಜಾರಿ ಬಿದ್ದು ಬಾಲಕನೊಬ್ಬ ಮೃತ
ಸೈಕಲ್ ತೊಳೆಯಲು ಹೋಗಿ ಕಲ್ಲು ಕ್ವಾರಿಯಲ್ಲಿ ಕಾಲು ಜಾರಿ ಬಿದ್ದು ಬಾಲಕ ಮೃತಪಟ್ಟಿರುವ ಘಟನೆ ನಡೆದಿದೆ.
ಸೈಕಲ್ ತೊಳೆಯಲು ಹೋಗಿ ಬಾಲಕ ಸಾವು
ಮೃತ ಬಾಲಕನನ್ನ ಸಿಂದಗಿ ತಾಲೂಕಿನ ಹಂದಿಗನೂರ ಗ್ರಾಮದ ಕಾರ್ತಿಕ ಗುರಣ್ಣ ಆಲ್ಯಾಳ(೧೪) ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಪೊಲೀಸ್ ಭೇಟಿ ನೀಡಿ ಮೃತ ಬಾಲಕನ ಶವ ಹೊರತೆಗೆದಿದ್ದಾರೆ. ಬಾಲಕನ ಸಾವಿಗೆ ಸ್ಥಳೀಯ ಆಡಳಿತವೇ ಕಾರಣ, ಕಲ್ಲು ಕ್ವಾರಿ ಮುಚ್ಚಿದ್ದರೆ ಈ ಅನಾಹುತ ಸಂಭವಿಸುತ್ತಿರಲಿಲ್ಲ ಎಂದು ಬಾಲಕನ ಪೋಷಕರು ಆರೋಪಿಸಿದ್ದಾರೆ.