ಕರ್ನಾಟಕ

karnataka

ETV Bharat / state

ವಿಜಯಪುರದಲ್ಲಿಂದು 92 ಮಂದಿಗೆ ಕೊರೊನಾ...96 ಮಂದಿ ಡಿಸ್ಚಾರ್ಜ್​​ - Vijayapura covid case

ಜಿಲ್ಲೆಯಲ್ಲಿಂದು 92 ಮಂದಿಗೆ ಕೊರೊನಾ ದೃಢವಾಗಿ ಇಬ್ಬರು ಸಾವನಪ್ಪಿದ್ದಾರೆ. ಅಲ್ಲದೆ 96 ಮಂದಿ ಆಸ್ಪತ್ರೆಯಿಂದ ಗುಣಮುಖರಾಗಿ ಡಿಸ್ಚಾರ್ಜ್​​ ಆಗಿದ್ದಾರೆ.

92 New corona cases reported in Vijayapura and 96 People discharged
ವಿಜಯಪುರದಲ್ಲಿಂದು 92 ಮಂದಿಗೆ ಕೊರೊನಾ...96 ಮಂದಿ ಡಿಸ್ಚಾರ್ಜ್​​

By

Published : Sep 11, 2020, 7:52 PM IST

ವಿಜಯಪುರ: ಜಿಲ್ಲೆಯಲ್ಲಿಂದು 92 ಹೊಸ ಕೊರೊನಾ ಪಾಸಿಟಿವ್​ ಪ್ರಕರಣ ದಾಖಲಾಗಿದ್ದು, ಜಿಲ್ಲೆಯ ಸೋಂಕಿತರ ಸಂಖ್ಯೆ 7,662ಕ್ಕೆ ಏರಿಕೆಯಾಗಿದೆ.

ಈ ನಡುವೆ ಇಂದು 96 ಮಂದಿ ಕೋವಿಡ್​ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಪಡೆದಿದ್ದಾರೆ. ಈವರೆಗೆ ಕೊರೊನಾದಿಂದ ಗುಣಮುಖರಾ‌ದವರ ಸಂಖ್ಯೆ 6,882ಕ್ಕೆ ತಲುಪಿದೆ.

ಇದಲ್ಲದೆ ಇಂದು ಸೋಂಕಿಗೆ ಇಬ್ಬರು ಬಲಿಯಾಗಿದ್ದಾರೆ. ಈ ಮೂಲಕ ಸಾವಿನಪ್ಪಿದವರ ಸಂಖ್ಯೆ 132ಕ್ಕೆ ಏರಿದ್ದು, ಜಿಲ್ಲೆಯಲ್ಲಿ ಒಟ್ಟು 648 ಸಕ್ರಿಯ ಪ್ರಕರಣಗಳಿವೆ.

ಇಲ್ಲಿಯವರೆಗೆ 64,038 ಜನರ ಮೇಲೆ ನಿಗಾ ಇಡಲಾಗಿದೆ. 84,599 ಜನರ ಸ್ಯಾಂಪಲ್ ಪಡೆಯಲಾಗಿದೆ. ಇವರಲ್ಲಿ 76,474 ಮಂದಿಯ ವರದಿ ನೆಗಟಿವ್ ಬಂದರೆ, 7,662 ಜನರಿಗೆ ಪಾಸಿಟಿವ್ ದೃಢಪಟ್ಟಿದೆ. ಇನ್ನೂ 461 ಜನರ ವರದಿ ಬರಬೇಕಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್​​​ ಕುಮಾರ್​​​ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details