ಕರ್ನಾಟಕ

karnataka

ETV Bharat / state

ವಿಜಯಪುರ: 11 ಸಾವಿರ ಗಡಿದಾಟಿದ ಕೊರೊನಾ ಪ್ರಕರಣಗಳು - Vijayapura corona updates

ಇಂದು ಜಿಲ್ಲೆಯಲ್ಲಿ ಪತ್ತೆಯಾಗಿರುವ ಕೊರೊನಾ ಪ್ರಕರಣಗಳ ಮಾಹಿತಿ ಇಂತಿದೆ.

Vijayapura
Vijayapura

By

Published : Oct 12, 2020, 9:00 PM IST

ವಿಜಯಪುರ :ಜಿಲ್ಲೆಯಲ್ಲಿ ಇಂದು 91 ಪಾಸಿಟಿವ್ ಪ್ರಕರಣಗಳು ದೃಢವಾಗಿವೆ. ಇಲ್ಲಿವರೆಗೆ 11,025 ಜನರಿಗೆ ಸೋಂಕು ತಗುಲಿದೆ.

ಗುಣಮುಖ :

ಇಂದು ಕೊರೊನಾದಿಂದ 89 ಜನ ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದು, ಇದುವರೆಗೆ ಒಟ್ಟು 9,901 ಮಂದಿ ಗುಣಮುಖರಾದಂತಾಗಿದೆ.

ಮೃತರ ಮಾಹಿತಿ :

ನಾನಾ ಕಾಯಿಲೆ, ಕೊರೊನಾ ಸೋಂಕಿನಿಂದ ಇಂದು ಒಬ್ಬರು ಸಾವನ್ನಪ್ಪಿದ್ದಾರೆ. ಈ ಮೂಲಕ ಮೃತರ ಸಂಖ್ಯೆ 176 ಕ್ಕೆ ಏರಿಕೆಯಾಗಿದೆ. ಮೃತರ ಅಂತ್ಯ ಸಂಸ್ಕಾರವನ್ನು ಶಿಷ್ಟಾಚಾರದಂತೆ ನೆರವೇರಿಸಲಾಗಿದೆ.

ಸಕ್ರಿಯ ಪ್ರಕರಣಗಳಿಷ್ಟು :

ಜಿಲ್ಲಾಸ್ಪತ್ರೆ, ನಾನಾ ಖಾಸಗಿ ಆಸ್ಪತ್ರೆಗಳಲ್ಲಿ 948 ಜನರಿಗೆ ಚಿಕಿತ್ಸೆ ಮುಂದುವರೆಸಲಾಗಿದೆ. ಇಲ್ಲಿಯವರೆಗೆ 1, 20, 487 ಜನರ ಮೇಲೆ ನಿಗಾ ಇಡಲಾಗಿದೆ.

ಕೋವಿಡ್ ಪರೀಕ್ಷಾ ವಿವರ :

ಇಲ್ಲಿಯವರೆಗೆ 1,20, 231 ಜನರ ಸ್ಯಾಂಪಲ್ ಪಡೆಯಲಾಗಿದೆ. ಇವರಲ್ಲಿ 1,06,569 ಜನರ ವರದಿ ನೆಗೆಟಿವ್ ಆಗಿದೆ. 11,025 ಜನರಿಗೆ ಪಾಸಿಟಿವ್ ದೃಢಪಟ್ಟಿದೆ. ಇನ್ನೂ 2,728 ಜನರ ವರದಿ ಬರಬೇಕಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.

ABOUT THE AUTHOR

...view details