ವಿಜಯಪುರ: ಜಿಲ್ಲೆಯಲ್ಲಿ ಇಂದು 87 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, 7,078ಕ್ಕೆ ಜಿಲ್ಲೆಯ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ವಿಜಯಪುರದಲ್ಲಿ 7 ಸಾವಿರ ಗಡಿ ದಾಟಿದ ಸೋಂಕಿತ ಸಂಖ್ಯೆ ಇಂದು 687 ಜನರ ಕೊರೊನಾ ಪರೀಕ್ಷೆ ಮಾಡಲಾಗಿದೆ. ಇಂದು ಕೊರೊನಾದಿಂದ 123 ಜನ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. ಈವರೆಗೆ ಕೊರೊನಾ ದಿಂದ ಗುಣಮುಖರಾದವರ ಸಂಖ್ಯೆ 6,312ಕ್ಕೆ ಏರಿಕೆಯಾಗಿದೆ.
ಬೇರೆ ಕಾಯಿಲೆ ಹಾಗೂ ಕೊರೊನಾ ಸೋಂಕಿನಿಂದ ಇಂದು ಇಬ್ಬರು ಮೃತಪಟ್ಟಿದ್ದಾರೆ. ಕೊರೊನಾ ಸೋಂಕಿನಿಂದ ಸಾವನಪ್ಪಿದವರ ಸಂಖ್ಯೆ 117ಕ್ಕೆ ಏರಿಕೆಯಾಗಿದೆ. ಮೃತರ ಅಂತ್ಯ ಸಂಸ್ಕಾರವನ್ನು ಸರ್ಕಾರದ ಮಾರ್ಗ ಸೂಚಿಯನ್ವಯ ನೆರವೇರಿಸಲಾಗಿದೆ. ವಿಜಯಪುರ ಜಿಲ್ಲಾಸ್ಪತ್ರೆ, ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ 649 ಜನರಿಗೆ ಚಿಕಿತ್ಸೆ ಮುಂದುವರೆದಿದೆ.
ಇಲ್ಲಿಯವರೆಗೆ 57,063 ಜನರ ಮೇಲೆ ನಿಗಾ ಇಡಲಾಗಿದೆ. 77,621 ಜನರ ಸ್ಯಾಂಪಲ್ ಪಡೆಯಲಾಗಿದೆ. ಇವರಲ್ಲಿ 70,294 ಜನರ ವರದಿ ನೆಗಟಿವ್ ಬಂದಿದೆ. ಇನ್ನೂ 249 ಜನರ ವರದಿ ಬಾಕಿ ಇದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ತಿಳಿಸಿದರು.