ವಿಜಯಪುರ:ರಾಷ್ಟ್ರಮಟ್ಟದ ಅಂತರ್ ವಿಶ್ವವಿದ್ಯಾಲಯ ಮಹಿಳಾ ಸೈಕ್ಲಿಂಗ್ ಚಾಂಪಿಯನ್ಶಿಪ್ನಲ್ಲಿ ಅವಘಡ ಸಂಭವಿಸಿದ್ದು, ಸ್ಪರ್ಧೆಯ ಕೊನೆಯ ನಿಮಿಷಗಳಲ್ಲಿ ಸೈಕ್ಲಿಸ್ಟ್ಗಳು ಪರಸ್ಪರ ತಾಗಿ ನೆಲಕ್ಕುರುಳಿದ್ದಾರೆ. ಈ ವೇಳೆ 8 ಸೈಕ್ಲಿಸ್ಟ್ಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.
50 ಕಿ.ಮೀ. ಮಾಸ್ ಸ್ಟಾರ್ಟ್ ಸ್ಪರ್ಧೆಯಲ್ಲಿ ಈ ಘಟನೆ ನಡೆದಿದೆ. ಓರ್ವ ಸೈಕ್ಲಿಸ್ಟ್ ಹಲ್ಲು ಮುರಿದಿದ್ದರೆ, ಮತ್ತೊಬ್ಬರ ಭುಜದ ಮೂಳೆಗೆ ಪೆಟ್ಟು ಬಿದ್ದಿದೆ. ಇತರ ಸೈಕ್ಲಿಸ್ಟ್ಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸದ್ಯ ಗಾಯಾಳುಗಳಿಗೆ ಬಿಎಲ್ಡಿಇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ರಾಷ್ಟ್ರಮಟ್ಟದ ಅಂತರ್ ವಿವಿ ಮಹಿಳಾ ಸೈಕ್ಲಿಂಗ್ ವೇಳೆ 8 ಮಂದಿ ಸೈಕ್ಲಿಸ್ಟ್ಗಳಿಗೆ ಗಾಯ ಹೊರವಲಯದ ಟೋಲ್ ನಾಕಾ ಬಳಿ ಮಾಸ್ ಸ್ಟಾರ್ಟ್ 50 ಕಿ.ಮೀ ಸೈಕ್ಲಿಂಗ್ ಸ್ಪರ್ಧೆ ನಡೆಯುತ್ತಿದ್ದ ವೇಳೆ ಕ್ರೀಡಾಪಟುಗಳು ವೇಗವಾಗಿ ಸಾಗುತ್ತಿದ್ದಾಗ, ಓರ್ವ ಸ್ಪರ್ಧಾಳುವಿನ ಸೈಕಲ್ ಇನ್ನೊಬ್ಬರಿಗೆ ತಾಗಿ, ನಿಯಂತ್ರಣ ಕಳೆದುಕೊಂಡು ಕೆಳಗಿ ಬಿದ್ದು ಘಟನೆ ಸಂಭವಿಸಿದೆ. ಯಾವುದೇ ಗಂಭೀರ ಗಾಯಗಳಾಗಿಲ್ಲ, ಕ್ರೀಡಾಪಟುಗಳು ಚೇತರಿಸಿಕೊಂಡಿದ್ದಾರೆ ಎಂದು ಉಪವೈದ್ಯಕೀಯ ಅಧೀಕ್ಷಕ ಡಾ.ವಿಜಯಕುಮಾರ ವಾರದ ತಿಳಿಸಿದ್ದಾರೆ.
ರಾಜಸ್ಥಾನ ಬಿಕನೇರ ಮಹರಾಜಾ ಗಂಜ ವಿವಿಯ ಮುಸ್ಕಾನ್ ಹಾಗೂ ಕವಿತಾ, ಬೆಳಗಾವಿ ರಾಣಿಚೆನ್ನಮ್ಮ ವಿವಿಯ ದಾನೇಶ್ವರಿ ಪಾಯಣ್ಣವರ, ಪಂಜಾಬ್ನ ಪಟಿಯಾಲ ವಿವಿಯ ಜಾಸ್ಮೀನ್, ಅಮೃತಸರ್ ಗುರುನಾನಕ ದೇವ ವಿವಿಯ ಮುಕುಲಾ, ಹರಿಯಾಣದ ಕುರುಕ್ಷೇತ್ರ ವಿವಿಯ ನಮೃತಾ ಇವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಥಮಿಕ ಚಿಕಿತ್ಸೆ ನೀಡಿ ಆಸ್ಪತ್ರೆಯಿಂದ ವಾಪಸ್ ಕಳುಹಿಸಲಾಗಿದೆ.