ವಿಜಯಪುರ: ಕೊರೊನಾ ವೈರಸ್ ಭೀತಿಯಲ್ಲಿ ಜಿಲ್ಲೆಯ ಜನರು ತತ್ತರಿಸಿ ಹೋಗಿದ್ದು, ಇಂದು ಬಿಡುಗಡೆಯಾದ ವೈದ್ಯಕೀಯ ವರದಿಯಲ್ಲಿ ಒಂದೇ ದಿನಕ್ಕೆ 7 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ.
ಕೋವಿಡ್-19 ಹಾಟ್ ಸ್ಪಾಟ್ ಆದ ವಿಜಯಪುರ: ಒಂದೇ ದಿನಕ್ಕೆ 7 ಮಂದಿಗೆ ಸೋಂಕು - ಕೋವಿಡ್-19
ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ವಿಜಯಪುರ ಜಿಲ್ಲೆಯಲ್ಲಿಂದು ಒಂದೇ ದಿನಕ್ಕೆ 7 ಪ್ರಕರಣಗಳು ದಾಖಲಾಗಿದ್ದು ಜಿಲ್ಲೆಯ ಜನರನ್ನು ಭಯ ಭೀತರನ್ನಾಗಿದೆ.
![ಕೋವಿಡ್-19 ಹಾಟ್ ಸ್ಪಾಟ್ ಆದ ವಿಜಯಪುರ: ಒಂದೇ ದಿನಕ್ಕೆ 7 ಮಂದಿಗೆ ಸೋಂಕು 7-more-corona-virus-cases-found-in-vijayapura](https://etvbharatimages.akamaized.net/etvbharat/prod-images/768-512-6813823-thumbnail-3x2-vjp.jpg)
ವಿಜಯಪುರ
ಒಂದೇ ದಿನಕ್ಕೆ 7 ಸೋಂಕಿತ ಪ್ರಕರಣ ದಾಖಲು
ಒಟ್ಟು 17 ಪಾಸಿಟಿವ್ ಕೊರೊನಾ ದೃಢವಾಗಿದ್ದು, ನಿನ್ನೆವರೆಗೆ 10 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದವು. ಇಂದು 7 ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ರೋಗಿ ನಂ 221ರ ಮಹಿಳೆಯಿಂದ 12ವರ್ಷದ ಬಾಲಕ (305), 65 ವರ್ಷದ ಪುರುಷ (306), 66 ವರ್ಷದ ಪುರುಷ (307), 37ವರ್ಷದ ಪುರುಷ (308), 70ವರ್ಷದ ಮಹಿಳೆ(309), 55ವರ್ಷದ ಮಹಿಳೆ (313)ಗೆ ಸೋಂಕು ಹರಡಿದ್ದು, ಎಲ್ಲರೂ ಚಪ್ಪರಬಂದ್ ಬಡಾವಣೆ ನಿವಾಸಿಗಳಾಗಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ 1.5ವರ್ಷದ ಬಾಲಕಿಗೆ ಸೋಂಕು ತಗಲಿದ್ದು, ಈಕೆ ರೋಗಿ-228 ಮತ್ತು 232 ಕುಟುಂಬ ಸದಸ್ಯಯಾಗಿದ್ದಾಳೆ ಎಂದು ತಿಳಿದುಬಂದಿದೆ.