ಕರ್ನಾಟಕ

karnataka

ಅಕ್ರಮವಾಗಿ ಬೆಳೆದಿದ್ದ 5 ಲಕ್ಷ 30 ಸಾವಿರ ಮೌಲ್ಯದ ಗಾಂಜಾ ವಶಕ್ಕೆ: ಆರೋಪಿ ಪರಾರಿ

ತಿಕೋಟಾ ತಾಲೂಕಿನ ರತ್ನಾಪುರ ಗ್ರಾಮದ‌ ರಾಮು ಗಗನಮಾಲಿ ಎಂಬುವವರು ತಮ್ಮ ಹೊಲದಲ್ಲಿರುವ ಬೆಳೆಗಳ ಮಧ್ಯೆ ಹಸಿ ಗಾಂಜಾ ಬೆಳೆದಿದ್ದರು. ಈ‌ ಕುರಿತು ಮಾಹಿತಿ ಕಲೆ ಹಾಕಿದ ಅಬಕಾರಿ ಪೊಲೀಸರು, ದಾಳಿ ನಡೆಸಿ 5 ಲಕ್ಷ 30 ಸಾವಿರ ಮೌಲ್ಯದ 53 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.

By

Published : Mar 2, 2021, 1:42 PM IST

Published : Mar 2, 2021, 1:42 PM IST

5 lakhs worth of marijuana seized in vijayapur
ಅಕ್ರಮವಾಗಿ ಬೆಳೆದಿದ್ದ 5 ಲಕ್ಷ 30 ಸಾವಿರ ಮೌಲ್ಯದ ಗಾಂಜಾ ವಶಕ್ಕೆ

ವಿಜಯಪುರ:ಹೊಲದ ಮಧ್ಯೆ ಅಕ್ರಮ ಗಾಂಜಾ ಬೆಳೆದಿರುವುದನ್ನು ಪತ್ತೆ ಹಚ್ಚಿದ ಅಬಕಾರಿ ಪೊಲೀಸರು, ದಾಳಿ ನಡೆಸಿ 5 ಲಕ್ಷ 30 ಸಾವಿರ ಮೌಲ್ಯದ 53 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಅಕ್ರಮವಾಗಿ ಬೆಳೆದಿದ್ದ 5 ಲಕ್ಷ 30 ಸಾವಿರ ಮೌಲ್ಯದ ಗಾಂಜಾ ವಶಕ್ಕೆ

ಜಿಲ್ಲೆಯ ತಿಕೋಟಾ ತಾಲೂಕಿನ ರತ್ನಾಪುರ ಗ್ರಾಮದ‌ ರಾಮು ಗಗನಮಾಲಿ ಎಂಬುವವರು ತಮ್ಮ ಹೊಲದಲ್ಲಿರುವ ಬೆಳೆಗಳ ಮಧ್ಯೆ ಹಸಿ ಗಾಂಜಾ ಬೆಳೆದಿದ್ದರು. ಈ‌ ಕುರಿತು ಮಾಹಿತಿ ಕಲೆ ಹಾಕಿದ ಅಬಕಾರಿ ಅಪರ ಆಯುಕ್ತ ಡಾ. ಮಂಜುನಾಥ ಹಾಗೂ ಅಬಕಾರಿ ಜಂಟಿ ಆಯುಕ್ತೆ ಸೈಯಿದಾ ಆಫ್ರೀನಾ ನೇತೃತ್ವದ ತಂಡ, ದಾಳಿ‌ ನಡೆಸಿ ಹೊಲದಲ್ಲಿ ಬೆಳೆದಿದ್ದ 315 ಹಸಿ ಗಾಂಜಾ ಗಿಡಗಳು ಹಾಗೂ 3 ಕೆಜಿ ಒಣ ಗಾಂಜಾ ವಶಪಡಿಸಿಕೊಂಡಿದ್ದಾರೆ. ಮಾರುಕಟ್ಟೆಯಲ್ಲಿ ಇದರ ಬೆಲೆ 5 ಲಕ್ಷ 30 ಸಾವಿರ ಎಂದು ಅಂದಾಜಿಸಲಾಗಿದೆ.

ಓದಿ:ನವಲಿ ಗ್ರಾಮದ ಸಮೀಪ ಸಮತೋಲಿತ ನೀರು ಸಂಗ್ರಹಣಾ ಜಲಾಶಯ ನಿರ್ಮಾಣ: ಸಿಎಂ ಅಧ್ಯಕ್ಷತೆಯಲ್ಲಿ ಸಭೆ

ಹೊಲದ ಮಾಲೀಕ ರಾಮು ಗಗನಮಾಲಿ ಪರಾರಿಯಾಗಿದ್ದು, ಈತನ ವಿರುದ್ದ ಎನ್​ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ABOUT THE AUTHOR

...view details