ವಿಜಯಪುರ: ಕಬ್ಬಿನ ಗದ್ದೆಗೆ ಆಕಸ್ಮಿಕ ಬೆಂಕಿ ತಗುಲಿ ಐದೂವರೆ ಎಕರೆ ಕಬ್ಬು ಸುಟ್ಟು ಭಸ್ಮವಾದ ಘಟನೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಸುಲ್ತಾನಪುರ ಗ್ರಾಮದಲ್ಲಿ ಜರುಗಿದೆ.
ಮುದ್ದೇಬಿಹಾಳದಲ್ಲಿ ಅಗ್ನಿ ಅವಘಡಕ್ಕೆ 5.5 ಎಕರೆ ಕಬ್ಬು ನಾಶ - ವಿಜಯಪುರದಲ್ಲಿ ಬೆಂಕಿ ಅವಘಡಕ್ಕೆ ಕಬ್ಬು ನಾಶ
ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಸುಲ್ತಾನಪುರ ಗ್ರಾಮದಲ್ಲಿ 5.5 ಎಕರೆ ಕಬ್ಬಿನ ಗದ್ದೆ ಬೆಂಕಿಗೆ ನಾಶವಾಗಿದೆ. ರೈತ ಹುಲಗಪ್ಪ, ಗಂಗಪ್ಪ ಎಂಬುವವರಿಗೆ ಸೇರಿದ ಕಬ್ಬಿನ ಗದ್ದೆ ಇದಾಗಿದೆ.
ಅಗ್ನಿ ಅವಘಡಕ್ಕೆ 5.5 ಎಕರೆ ಕಬ್ಬು ನಾಶ
ಗ್ರಾಮದ ಹುಲಗಪ್ಪ ತೋಟದ ಹಾಗೂ ಗಂಗಪ್ಪ ಎಂಬ ಇಬ್ಬರು ರೈತರ ಹೂಲಕ್ಕೆ ಆಕಸ್ಮಿಕ ಬೆಂಕಿ ಬಿದ್ದಿದೆ. ಸ್ಥಳಕ್ಕೆ ಮುದ್ದೇಬಿಹಾಳ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು.ಮುದ್ದೇಬಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.