ಕರ್ನಾಟಕ

karnataka

ETV Bharat / state

ಸುಪಾರಿ ಕೊಲೆ ಪ್ರಕರಣ: ವಿಜಯಪುರದಲ್ಲಿ ಐವರು ಆರೋಪಿಗಳು ಅರೆಸ್ಟ್​ - vijayapura latest news

ಆಗಸ್ಟ್​​ 27 ರಂದು ನಡೆದಿದ್ದ ಬೈಕ್ ಅಪಘಾತದಲ್ಲಿ ಅನಿಲ್ ಬಿರಾದಾರ್‌ ಮೃತಪಟ್ಟಿದ್ದರು. ಅದು ಬೈಕ್ ಅಪಘಾತವಲ್ಲ, ಕೊಲೆ ಎಂದು ತನಿಖೆ ವೇಳೆ ತಿಳಿದುಬಂದಿದ್ದು, ಐವರನ್ನು ಬಂಧಿಸಲಾಗಿದೆ ಎಂದು ವಿಜಯಪುರ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಆನಂದ್​ ಕುಮಾರ್​ ತಿಳಿಸಿದ್ದಾರೆ.

sp Anand Kumar
ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಆನಂದ್​ ಕುಮಾರ್

By

Published : Sep 18, 2021, 6:59 AM IST

ವಿಜಯಪುರ: ಚುನಾವಣೆ ದ್ವೇಷ ಹಾಗು ಹಳೇ ದ್ವೇಷದ ಹಿನ್ನೆಲೆ, ಬೈಕ್​​ ‌ಅಪಘಾತದ ಮೂಲಕ ವ್ಯಕ್ತಿಯೋರ್ವನ್ನು ಕೊಲೆ ಮಾಡಿದ್ದ ಆರೋಪದಡಿ ಐವರನ್ನು ಬಂಧಿಸುವಲ್ಲಿ ವಿಜಯಪುರ ಗ್ರಾಮೀಣ ಪೊಲೀಸರು‌ ಯಶಸ್ವಿಯಾಗಿದ್ದಾರೆ.

ವಿಜಯಪುರ ತಾಲೂಕಿನ ಇಟ್ಟಂಗಿಹಾಳ ಬಳಿ ಬೈಕ್ ಅಪಘಾತ ನಡೆದಿತ್ತು. ಆಗಸ್ಟ್​​ 27 ರಂದು ನಡೆದಿದ್ದ ಬೈಕ್ ಅಪಘಾತದಲ್ಲಿ ಅನಿಲ್ ಬಿರಾದಾರ್‌ ಮೃತಪಟ್ಟಿದ್ದರು. ಅಂದು ನಡೆದಿದ್ದು ಬೈಕ್ ಅಪಘಾತವಲ್ಲ, ಕೊಲೆ ಎಂದು ತನಿಖೆ ವೇಳೆ ತಿಳಿದುಬಂದಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಆನಂದ್​ ಕುಮಾರ್​ ತಿಳಿಸಿದ್ದಾರೆ.

ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಆನಂದ್​ ಕುಮಾರ್

ಮೂವರು ಸುಪಾರಿ ಹಂತಕರು ಸೇರಿ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಸುಪಾರಿ ಹಂತಕರಾದ ಸುರೇಶ್ ಆವಟಿ, ಬೀರಪ್ಪ ಗುಗವಾಡ್, ರಾಜು ಆಸಂಗಿ ಮತ್ತು ಸುಪಾರಿ ನೀಡಿದ್ದ ಕಿರಣ್ ಕುಮಾರ್, ಬನ್ನೆಪ್ಪ ಬಂಧಿತ ಆರೋಪಿಗಳು.

ಇದನ್ನು ಓದಿ:ಮೈಸೂರಿನಲ್ಲಿ ಬಿಹಾರದ ಕಾರ್ಮಿಕನಿಂದ ಅಪ್ರಾಪ್ತೆ ಮೇಲೆ ಅತ್ಯಾಚಾರ.. ಆರೋಪಿ ಪೊಲೀಸರ ವಶಕ್ಕೆ

ಬಂಧಿತರಿಂದ ಒಂದು ಕಬ್ಬಿಣದ ಆಯುಧ, 2 ಬೈಕ್, ನಾಲ್ಕು ಮೊಬೈಲ್, 35 ಸಾವಿರದ 800 ರೂ. ವಶಕ್ಕೆ ಪಡೆದ್ದಾರೆ. ಎರಡೂವರೆ ಲಕ್ಷ ಸುಪಾರಿ ಪಡೆದಿದ್ದ ಆರೋಪಿಗಳು, ಡಾಬಾದಲ್ಲಿ ಅನಿಲ್ ಬಿರಾದಾರ್​ಗೆ ಕಂಠಪೂರ್ತಿ ಕುಡಿಸಿ ಹಲ್ಲೆ ಮಾಡಿ, ಕೊಲೆ ಮಾಡಿದ್ದಾರೆ. ನಂತರ ಬೈಕ್ ಅಪಘಾತ ಎಂಬಂತೆ ಬಿಂಬಿಸಿದ್ದರು ಎಂದು ಎಸ್​ಪಿ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details