ವಿಜಯಪುರ: 2ವರ್ಷದ ಬಾಲಕಿ ಸೇರಿ ಜಿಲ್ಲೆಯಲ್ಲಿಂದು 4 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 221ಕ್ಕೇರಿದೆ.
ವಿಜಯಪುರ: 2 ವರ್ಷದ ಮಗು ಸೇರಿ ನಾಲ್ವರಲ್ಲಿ ಸೋಂಕು ದೃಢ - ವಿಜಯಪುರ ಲೆಟೆಸ್ಟ್ ನ್ಯೂಸ್
ವಿಜಯಪುರ ಜಿಲ್ಲೆಯಲ್ಲಿಂದು 4 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 221ಕ್ಕೇರಿದೆ. 147 ಜನ ಗುಣಮುಖರಾಗಿದ್ದಾರೆ.
![ವಿಜಯಪುರ: 2 ವರ್ಷದ ಮಗು ಸೇರಿ ನಾಲ್ವರಲ್ಲಿ ಸೋಂಕು ದೃಢ Corona case](https://etvbharatimages.akamaized.net/etvbharat/prod-images/768-512-05:54-kn-vjp-05-four-ve-av-7202140-11062020175411-1106f-1591878251-42.jpg)
ಇಂದು ಜಿಲ್ಲೆಯಲ್ಲಿ ಇಬ್ಬರು ಬಾಲಕಿಯರು, ಓರ್ವ ಬಾಲಕ ಹಾಗೂ ಒಬ್ಬ ಪುರುಷನಿಗೆ ಸೋಂಕು ತಗುಲಿದೆ ದೃಢಪಟ್ಟಿದೆ. ಇವರೆಲ್ಲಾ ವಿಜಯಪುರದ ಕಂಟೈನ್ಮೆಂಟ್ ಪ್ರದೇಶದ P-5011 (40ವರ್ಷ-ಪುರುಷ)ನಿಂದ ಸೋಂಕು ತಗುಲಿದವರಾಗಿದ್ದಾರೆ. ಸದ್ಯ ಇವರನ್ನು ನಗರದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ.
16 ಜನ ಗುಣಮುಖ: ಮಹಾಮಾರಿ ಕೊರೊನಾ ಸೋಂಕಿಗೆ ಒಳಗಾಗುವವರ ಜೊತೆಗೆ ಗುಣಮುಖರಾಗುವವರ ಸಂಖ್ಯೆ ಕೂಡಾ ಹೆಚ್ಚುತ್ತಿದೆ. ಕೊರೊನಾ ಸೋಂಕಿನಿಂದ ಬಳಲುತ್ತಿದ್ದ 16 ಜನ ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈವರೆಗೆ ಗುಣಮುಖರಾದವರ ಸಂಖ್ಯೆ 147ಕ್ಕೆ ಏರಿದೆ. ಇನ್ನೂ 68 ಜನ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.