ವಿಜಯಪುರ:ಜಿಲ್ಲೆಯಲ್ಲಿಂದು ಮತ್ತೆ ನಾಲ್ವರಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಈವರಿಗೆ 321 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರಲ್ಲಿ 232 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ವಿಜಯಪುರದಲ್ಲಿ ಮತ್ತೆ ನಾಲ್ವರಿಗೆ ಕೊರೊನಾ ಸೋಂಕು ದೃಢ - Maharashtra corona infection
ವಿಜಯಪುರದ ಇಬ್ಬರು ಪುರುಷರು ಹಾಗೂ ಒಬ್ಬಳು ಯುವತಿ ಮತ್ತು ಓರ್ವ ಯುವಕನಿಗೆ ಕೊರೊನಾ ಸೋಂಕು ದೃಢವಾಗಿದೆ. ಇಬ್ಬರು ಮಹಾರಾಷ್ಟ್ರ ನಂಟು ಹೊಂದಿದ್ದರೆ. ಇನ್ನಿಬ್ಬರಿಗೆ ಗಂಟಲು ದ್ರವ ಪರೀಕ್ಷೆ ನಡೆಸಿದಾಗ ದೃಢವಾಗಿದೆ.
![ವಿಜಯಪುರದಲ್ಲಿ ಮತ್ತೆ ನಾಲ್ವರಿಗೆ ಕೊರೊನಾ ಸೋಂಕು ದೃಢ 4 More coronavirus positive cases reported in Vijayapur today](https://etvbharatimages.akamaized.net/etvbharat/prod-images/768-512-7755420-447-7755420-1593011024648.jpg)
ವಿಜಯಪುರದಲ್ಲಿ ಮತ್ತೆ ನಾಲ್ವರಿಗೆ ಕೊರೊನಾ ಸೋಂಕು ದೃಢ
ಇನ್ನೂ 82 ಜನ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ದಾಖಲಾದ ನಾಲ್ವರಲ್ಲಿ ಒಬ್ಬಳು ಯುವತಿ, ಒಬ್ಬ ಯುವಕ ,ಇಬ್ಬರು ಪುರುಷರು ಇದ್ದಾರೆ. ಇವರಲ್ಲಿ ಇಬ್ಬರು ಶೀತ, ನೆಗಡಿಯಿಂದ ಆಸ್ಪತ್ರೆಗೆ ದಾಖಲಾದ ಮೇಲೆ ಅವರ ಗಂಟಲು ದ್ರವ ಪರೀಕ್ಷೆ ನಡೆಸಿದಾಗ ಪಾಸಿಟಿವ್ ದೃಢಪಟ್ಟಿದೆ.
ಇನ್ನಿಬ್ಬರು ಮಹಾರಾಷ್ಟದ ನಂಟಿನಿಂದ ಕೊರೊನಾ ಪಾಸಿಟಿವ್ ಬಂದಿದೆ. ಇದಲ್ಲದೆ ಇಂದು 10 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಬಿಡುಗಡೆಯಾದವರ ಸಂಖ್ಯೆ 232ಕ್ಕೆ ಏರಿಕೆಯಾಗಿದೆ.