ವಿಜಯಪುರ: ಕೊರೊನಾ ಸೋಂಕು ಜಿಲ್ಲೆಯಲ್ಲಿ ಮತ್ತೆ ಉಲ್ಬಣಿಸುತ್ತಿದೆ. ಮಹಾರಾಷ್ಟ್ರದಿಂದ ಬಂದ ವಲಸೆ ಕಾರ್ಮಿಕರಿಂದ ಸೋಂಕು ಗ್ರಾಮೀಣ ಭಾಗದಲ್ಲೂ ಹರಡುತ್ತಿದೆ. ಕೇವಲ ಎರಡು ಇದ್ದ ಸೀಲ್ಡೌನ್ ಪ್ರದೇಶಗಳ ಸಂಖ್ಯೆ ಇಂದು 37ಕ್ಕೆ ತಲುಪಿದೆ.
ಜಿಲ್ಲೆಯಲ್ಲಿ ಲಾಕ್ಡೌನ್ ಅವಧಿಯಲ್ಲಿ ಸೋಂಕಿತರ ಸಂಖ್ಯೆ 40 ದಾಟಿರಲಿಲ್ಲ. ಆದರೆ ಸೀಲ್ಡೌನ್ ಪ್ರದೇಶಗಳನ್ನು ತೆರವುಗೊಳಿಸಿದ ನಂತರ ಸೋಂಕಿತರ ಸಂಖ್ಯೆ ಈಗ ದ್ವಿಶತಕದತ್ತ ದಾಪುಗಾಲು ಹಾಕಿದೆ. ಇದರ ಜೊತೆಗೆ ಕೆಲ ಕಂಟೈನ್ಮೆಂಟ್ ಝೋನ್ಗಳಲ್ಲಿ ಮತ್ತೆ ಸೋಂಕಿತರು ಪತ್ತೆಯಾಗುತ್ತಿರುವುದು ಜಿಲ್ಲಾಡಳಿತಕ್ಕೆ ತಲೆನೋವು ತಂದಿದೆ. ಸಾರ್ವಜನಿಕರ ನಿರ್ಲಕ್ಷ್ಯ ಸೋಂಕಿತರ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ.